ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಗುಂಡೇನಹಳ್ಳಿಯಿಂದ-ಬೈರನಾಯ್ಕನಹಳ್ಳಿ ವರೆಗೆ ಡಾಂಬರ್ ರಸ್ತೆ ಕಾಮಗಾರಿಗೆ ಶಾಸಕ ಎನ್.ಶ್ರೀನಿವಾಸ್ ಚಾಲನೆ

1 min read

ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಗುಂಡೇನಹಳ್ಳಿಯಿಂದ-ಬೈರನಾಯ್ಕನಹಳ್ಳಿ ವರೆಗೆ ಡಾಂಬರ್ ರಸ್ತೆ ಕಾಮಗಾರಿಗೆ ಚಾಲನೆ, ಗುತ್ತಿಗೆದಾರರಾದ ರಘು ಗೌಡ ಮತ್ತು ಮೋಹನ್ ಬಾಬು, ಎಇಇ ನಟರಾಜು ರಿಗೆ ಸ್ಥಳದಲ್ಲೇ ಗುಣ ಮಟ್ಟದ ಪರಿಶೀಲನೆ ಮಾಡಿಸಿದ ಶಾಸಕ.

ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾಣದ ಕಾಮಗಾರಿಗೆ ಕಳೆದ ೬ ತಿಂಗಳಿಂದ ಚಾಲನೆ ನೀಡುತ್ತಾ ಬಂದಿದ್ದೇನೆ, ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಕ್ಷೇತ್ರದಲ್ಲಿ ಮಾಡುತ್ತಾ ಬರುತ್ತಿದ್ದೇನೆ ಎಂದು ನೆಲಮಂಗಲ ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸ್ ಹೇಳಿದರು. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಗುಂಡೇನಹಳ್ಳಿ ಕ್ರಾಸ್ ನಿಂದ ಭೈರನಾಯಕನಹಳ್ಳಿ ಗ್ರಾಮದವರೆಗೂ ೫ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಿ ಮಾತನಾಡಿದರು.

ಶಾಸಕ ಎನ್.ಶ್ರೀನಿವಾಸ್ ಮಾತನ್ನು ಮುಂದುವರೆಸಿ, ನೆಲಮಂಗಲ ನಗರಕ್ಕೆ ಒಳಚರಂಡಿ ಕಾಮಗಾರಿ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಗೆ ಜನವರಿ ಕೊನೆಯ ವಾರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಅವರಿಂದ ಚಾಲನೆ ದೊರೆಯಲಿದೆ, ಕೆಂಪಲಿಂಗನಹಳ್ಳಿ ದ್ವಿಪಥ ರಸ್ತೆ ನಿರ್ಮಾಣ, ಗೊಲ್ಲಹಳ್ಳಿ ರಸ್ತೆ ಕಾಮಗಾರಿ, ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ ಅನುದಾನ ಮೀಸಲಿಟ್ಟಿದ್ದು, ಕೆಲ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ, ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹಾಗೂ ಗ್ರಾಮಕ್ಕೆ ಬೇಕಾಗುವ ಅಭಿವೃದ್ಧಿ ಕರ‍್ಯಗಳನ್ನು ಗಮನಕ್ಕೆ ತನ್ನಿ ಎಂದರು.

ಕ್ಷೇತ್ರದಲ್ಲಿನ ನಡೆಯುವ ಪ್ರತಿಯೊಂದು ಕಾಮಗಾರಿಯ ಗುತ್ತಿಗೆದಾರರು, ಗುಣಮಟ್ಟದಲ್ಲಿ ಯಾವುದೇ ರೀತಿಯಿಂದಲೂ ವ್ಯತ್ಯಾಸವಾಗಬಾರದು, ಸ್ಥಳೀಯರು ಹಾಗೂ ಮುಖಂಡರುಗಳು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಮಗಾರಿಗೆ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ಗಮನಿಸಬೇಕು, ಗುಣಮಟ್ಟವಿಲ್ಲದೇ ಇದ್ದರೆ ಗಮನಕ್ಕೆ ತರಬೇಕು, ಎಂದು ಎಇಇ ನಟರಾಜು, ಗುತ್ತಿಗೆದಾರ ರಘು ಗೌಡ ತಂಡದಿಂದ ಕಾಮಗಾರಿ ಗುಣಮಟ್ಟದ ಪ್ರಾತ್ಯಕ್ಷಿಕೆ ಪರಿಶೀಲಿಸಿದರು.

ಬೇಗೂರು- ತ್ಯಾಮಗೊಂಡ್ಲು ರಸ್ತೆಗೆ ನಿಗಧಿಯಾಗಿದ್ದ ೧೬.೫ ಕೋಟಿ ವೆಚ್ಚದ ಕಾಮಗಾರಿಯ ಜೊತೆಯಲ್ಲಿ ೧೯ ಕೋಟಿ ರೂಗಳನ್ನು ಹೆಚ್ಚುವರಿಯಾಗಿ ಸೇರಿಸಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ನೂತನ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಹಿಂದಿನ ಟೆಂಡರ್ ರದ್ದು ಪಡಿಸಲಾಗಿದ್ದು, ಅದಷ್ಟು ಬೇಗ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತೇನೆ, ರಸ್ತೆಯೂದ್ದಕ್ಕೂ ವಿದ್ಯುತ್ ದ್ವೀಪದ ವ್ಯವಸ್ಥೆ ಮಾಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಸೋಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಶ್, ನಾಗರಾಜು, ಕೆಪಿಸಿಸಿ ಸದಸ್ಯರಾದ ಪ್ರಕಾಶ್ ಬಾಬು, ಅಗಳಕುಪ್ಪೆ ಗೋವಿಂದರಾಜು, ಗುತ್ತಿಗೆದಾರ ಮೋಹನ್ ಬಾಬು, ರಘು ಗೌಡ, ಗ್ರಾಮದ ಮುಖಂಡರಾದ ವಾಸುದೇವ್, ಸಾದತ್ ಉಲ್ಲಾ, ಹಸಿರುಹಳ್ಳಿ ಕುಮಾರ್, ಮೂರ್ತಿ, ಬಮೂಲ್ ನಿರ್ದೇಶಕ ಭಾಸ್ಕರ್, ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಆಂಜನಮೂರ್ತಿ, ಸದಸ್ಯರಾದ ಹರೀಶ್, ನರಸಿಂಹಮೂರ್ತಿ, ವಾದಕುಂಟೆ ಚನ್ನಕೃಷ್ಣ, ಅಪ್ಪಾಜಿಗೌಡ,ಬುಲೆಟ್‌ರಾಜು, ಸೋಮಶೇಖರ್, ಟಿವಿ ರಾಮಣ್ಣ, ಸುನೀಲ್, ಕೃಷ್ಣಸ್ವಾಮಿ, ಚಿದಾನಂದ, ಕಾರೇಹಳ್ಳಿ ಬಾಬಣ್ಣ, ಗಂಗಪ್ಪ, ನಿರ್ವಾಣಸ್ವಾಮಿ, ಪ್ರದೀಪ್,ಅಖಿಲ್, ವಿಶ್ವನಾಥ್, ಧರಣೀಶ, ಎಇಇ ನಟರಾಜು, ಗುತ್ತಿಗೆದಾರರಾದ ರಘು ಗೌಡ, ಬಾಬು, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

About The Author

Leave a Reply

Your email address will not be published. Required fields are marked *