ನೂತನ ಕೊಠಡಿಗಳ ಉದ್ಘಾಟಿಸಿದ ಶಾಸಕ ದರ್ಶನ್
1 min readನೂತನ ಕೊಠಡಿಗಳ ಉದ್ಘಾಟಿಸಿದ ಶಾಸಕ ದರ್ಶನ್
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಉದ್ಘಾಟನೆ
ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿತಿ ಕೇಂದ್ರದಿ0ದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ಕೊಠಡಿ ಮತ್ತು ಮೂರು ಶೌಚಾಲಯಗಳನ್ನು ಶಾಸಕ ದರ್ಶನ್ ಧ್ರುವ ನಾರಾಯಣ್ ಉದ್ಘಾಟಿಸಿದರು.
ಶಾಲಾ ಕೊಠಡಿ ಮತ್ತು ಶೌಚಾಲಯಗಳ ಉದ್ಘಾಟನೆ ನಂತರ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಬ್ಲಾಕ್ ಬೋರ್ಡ್ ಬದಲು ಗ್ರೀನ್ ಬೋರ್ಡ್ ಬಳಸಬೇಕು, ನಿರ್ಮಿಸಿದ ಶೌಚಾಲಯ ತೃಪ್ತಿಕರವಾಗಿಲ್ಲ. ಗುಣಮಟ್ಟದ ಕಾಮಗಾರಿ, ಗುಣಮಟ್ಟದ ವಸ್ತುಗಳನ್ನು ಬಳಸಿ, ಗುಣಮಟ್ಟದಿಂದ ಕೂಡಿದ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಉತ್ತಮ ಶಿಕ್ಷಣ ನೀಡಲು ಸರ್ಕಾರ ಶ್ರಮಿಸುತ್ತಿದೆ. ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ವಾತಾವರಣ, ಒಳ್ಳೆಯ ಪರಿಸರ, ಮೂಲ ಸೌಕರ್ಯಗಳು ಗುಣಮಟ್ಟವಾಗಿರಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟ ಪಾಠಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮುಂದೆ ಸಾಮಾಜಿಕ ಜಾಲತಾಣವೆ ಸಮಯದ ಸಮಸ್ಯೆಗಳಾಗಬಹುದು ಇದರಿಂದ ಹೊರಬರಬೇಕೆಂದು ಶಾಸಕರು ತಿಳಿಸಿದರು.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡಾ ಚಟುವಟಿಕೆಯಿಂದ ದೈಹಿಕ ಮತ್ತು ಮಾನಸಿಕ ವಾಗಿ ಆರೋಗ್ಯ ಉತ್ತಮವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಕಣ್ಣಿಗೆ ಮತ್ತು ಕೈಗೆ ಸಂಯೋಜನೆ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕ್ರೀಡೆಗಳ ಕಡೆ ಗಮನ ನೀಡಿ, ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ ಎಂದರು.
ಪದವಿ ಪೂರ್ವ ಕಾಲೇಜು ಮತ್ತು ಶಾಲಾ ಕಟ್ಟಡ ನೂರು ವರ್ಷ ತುಂಬಿದ ಸಮಯದಲ್ಲಿದೆ. ಕಟ್ಟಡ ಸಾಕಷ್ಟು ದುರಸ್ತಿಯಾಗಿದೆ. ಅಭಿವೃದ್ಧಿಪಡಿಸಲು ಕ್ರಮ ಕೈಗೊಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪ್ರಾಚಾರ್ಯರಾದ ಸಿ ಆರ್ ದಿನೇಶ್ ಕುಮಾರ್, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಇದ್ದರು.