ಬೆಳೆ ಹಾನಿ ಪರಿಹಾರ ದುರುಪಯೋಗ
1 min readಬೆಳೆ ಹಾನಿ ಪರಿಹಾರ ದುರುಪಯೋಗ
ಪಾತಾಪೂರ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ದೂರು
ರೈತರಿಂದ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ದೂರು
2024-25ನೇ ಸಾಲಿನಲ್ಲಿ ಬೆಳೆದ ಸೋಯಾ, ಹೆಸರು, ಉದ್ದು ಮತ್ತು ತೊಗರಿ ಬೆಳೆಗಳು ಧಾರಕಾರವಾಗಿ ಸುರಿದ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿದ್ದು, ಈ ಸಂಬ0ಧ ಸರ್ಕಾರ ಬೆಳೆ ನಾಶ ಪರಿಹಾರ ರೂಪದಲ್ಲಿ ಹಣ ಬಿಡುಗಡೆಗೊಳಿಸಿದರೆ ಗ್ರಾಮ ಆಡಳಿತಾಧಿಕಾರಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರೋಪಿಸಿ ರೈತರು ದೂರು ನೀಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಬೆಳೆ ನಷ್ಟ ಪರಿಹಾರ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ. ಪಾತಾಪೂರ ಗ್ರಾಮ ಲೆಕ್ಕಾಧಿಕಾರಿ ಸಲಾವುದ್ದಿನ್ ಎಂಬಾತ ಒಂದೇ ಕುಟುಂಬದ ೪ ಸದಸ್ಯರ ಹೆಸರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಇದೇ ರೀತಿಯಲ್ಲಿ ಪಾಕಾಪೂರ ಗ್ರಾಮದಲ್ಲಿ ಸುಮಾರು 400 ರೈತರಿದ್ದು, ಪಹಣಿ ಹೊಂದಿರುವ ರೈತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಹಾಕದೆ ತನಗೆ ಬೇಕಾದ ರೈತರ ಒಂದೆ ಕುಟುಂಬದ 3-4 ಸದಸ್ಯರ ಖಾತೆಗಳಿಗೆ ಹಣ ಜಮಾ ಮಾಡಿ ರೈತರ ಮಧ್ಯೆ ತಾರಮ್ಮ ನೀತಿ ಅನುಸರಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈ ಸಂಬ0ದ ಗ್ರಾಮಲೆಕ್ಕಾಧಿಕಾರಿಯನ್ನು ವಿಚಾರಿಸಿದರೆ ಎಸಿ ಮತ್ತು ಡಿ.ಸಿ ಹತ್ತಿರ ಹೋಗಿ, ನನ್ನನ್ನು ಯಾರೂ ಏನೂ ಮಾಡುವುದಿಲ್ಲ ಎಂದು ಅಸಧ್ಯವಾಗಿ ವರ್ತಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ ಗ್ರಾಮ ಆಡಳಿತಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಬೆಳೆ ಹಾನಿಗೆ ಗುರಿಯಾಗಿರುವ ರೈತರಿಗೆ ಸರ್ಕಾರದ ಪರಿಹಾರ ಹಣ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ರೈತರು ಇಂದು ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಚಂದ್ರಶೇಖರ ಮಾಶೆಟಿ,್ಟ ಮಾದಪ್ಪಾ ಬಿರಾದಾರ, ಬಂಡೆಪ್ಪಾ ಕರಂಜೆ, ವಿಠಲ ಆಲೂರ, ಬಾಬು ಸೋಲಾಪೂರೆ, ಅಮೃತ ಬಿರಾದಾರ, ಬಾಬುಬೆಡಕುಂದೆ, ಮಾರುತಿ ಆಲೂರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.