ಯಾತ್ರಿ ನಿವಾಸ ಉದ್ಘಾಟಿಸಿದ ಸಚಿವ ಮಹದೇವಪ್ಪ
1 min readಯಾತ್ರಿ ನಿವಾಸ ಉದ್ಘಾಟಿಸಿದ ಸಚಿವ ಮಹದೇವಪ್ಪ
ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ
ನಂಜನಗೂಡಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸವನ್ನು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಇಂದು ಉದ್ಘಾಟಿಸಿದರು. ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ನಿರ್ಮಾಣವಾಗಿದ್ದ ಯಾತ್ರಿ ನಿವಾಸ ಕಟ್ಟಡವನ್ನು ಸಚಿವರು ಇಂದು ಉದ್ಘಾಟಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣ ಮಾಡಿರುವ ಯಾತ್ರಿ ನಿವಾಸ, ಅಡುಗೆ ಮನೆ, ಊಟದ ಮನೆ ಉದ್ಘಾಟನೆ ಮಾಡಲಾಯಿತು. ಕವಲಂದೆ ಮತ್ತು ದೇವನೂರು ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಎಲ್ಲರು ಪ್ರೀತಿಸುವ ಮಹಾ ಕ್ಷೇತ್ರ ಎಂದರೆ ಶ್ರೀ ಗುರುಮಲ್ಲೆಶ್ವರ ದಾಸೋಹ ಮಠ ಎಂದರು.
ಸಾಕಷ್ಟು ಶಾಸಕರು, ಸಂಸದರು, ಸಚಿವರು ಬಂದರೂ ಈ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿ ದೇವನೂರಿನಲ್ಲೆ ನಾನು ಓದುತ್ತಿದ್ದಾ. ಎಲ್ಲ ಸಮುದಾಯವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಂವಿಧಾನದ ಆಶಯಗಳಿಗೆ ಸ್ಪಂದಿಸಿ ನಾವು ಕೆಲಸ ಮಾಡಬೇಕು. ಯಾತ್ರಿ ನಿವಾಸ ಚಿಂತನೆಯ ಚಾವಡಿ ಆಗಬೇಕು. ಸುಮಾರು ೧.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗ ಪಡೆಯಬೇಕು ಎಂದರು.
ಸಾ0ಸ್ಕೃತಿಕ ನಗರಿಯ ಮುಕುಟ ನಂಜನಗೂಡು. ನಂಜನಗೂಡಿನ ಸರ್ವಾಂಗಿನ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಯುವ ಶಾಸಕ ದರ್ಶನ್ ಧ್ರುವನಾರಾಯಣ್, ಸಂಸದ ಸುನೀಲ್ ಬೋಸ್ ಮೈಸೂರು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಾರೆ. ಮುಖ್ಯಮಂತ್ರಿಗಳಿಗೆ ಹೇಳಿ ಮತ್ತಷ್ಟು ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು. ೯೦ ಕೋಟಿ ವೆಚ್ಚದಲ್ಲಿ ದೇವನೂರು ಏತನೀರಾವರಿ ಯೋಜನೆಗೆ ಮಂಜೂರು ಮಾಡಲಾಗಿದೆ ಎಂದರು.
ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಲಾಗಿದೆ. ಕವಲಂದೆ ಭಾಗ ನೀರಾವರಿ ಪ್ರದೇಶ ಆಗಲಿದೆ. ಹಳ್ಳಿಗಳು ಉದ್ದಾರಗಬೇಕು, ಕೃಷಿ ಚಟುವಟಿಕೆ ನಡೆಸಲ ರೈತರಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಗುರುಮಲ್ಲೆಶ್ವರ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷ ಮಂಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಮಹದೇವಪ್ಪ ಇದ್ದರು.