ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಸಿವಿವಿ ಕ್ಯಾಂಪಸ್‌ನಲ್ಲಿ ಸಹಸ್ರನಾಮಾರ್ಚನೆ

1 min read

ಸಿವಿವಿ ಕ್ಯಾಂಪಸ್‌ನಲ್ಲಿ ಸಹಸ್ರನಾಮಾರ್ಚನೆ
ನೂರಾರು ಮಹಿಳೆಯರಿಂದ ಅಧ್ಧೂರಿ ಕಾರ್ಯಕ್ರಮ
ಕೆ.ವಿ ನವೀನ್ ಕಿರಣ್ ಕಾರ್ಯಕ್ರಮದಲ್ಲಿ ಭಾಗಿ

ಸತತ 15 ವರ್ಷಗಳಿಂದ ಸಿವಿವಿ ಕ್ಯಾಂಪಸ್ ನಲ್ಲಿ ಚಂಡಿಕಾ ಹೋಮ ಹಾಗೂ ಸಾಮೂಹಿಕ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ 400ಕ್ಕೂ ಹೆಚ್ಚು ಮಹಿಳೆಯರ ಸಮ್ಮುಖದಲ್ಲಿ ನಡೆಯುತ್ತಿದೆ. ಕೆವಿ ಮತ್ತು ಪಂಚಗಿರಿ ವಿದ್ಯಾ ದತ್ತಿಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ನೇತೃತ್ವದಲ್ಲಿ ಇಂದು ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಸಿ.ವಿ.ವಿ. ಕ್ಯಾಂಪಸ್‌ನ ಶ್ರೀ ಸರ್ವ ವಿಘ್ನನಿವಾರಕ ಮಹಾಗಣಪತಿ ದೇವಾಲಯದಲ್ಲಿ ಸತತ 15 ವರ್ಷಗಳಿಂದ ಚಂಡಿಕಾ ಹೋಮ ಹಾಗೂ ಸಾಮೂಹಿಕ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ನಡೆಸಸಲಾಗುತ್ತಿದೆ. ಕೆ.ವಿ.ಮತ್ತು ಪಂಚಗಿರಿ ವಿದ್ಯಾ ದತ್ತಿಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ನೇತೃತ್ವದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ 400ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಪೂಜಾ ಕೈಕಂರ್ಯಗಳು ನೆರವೇರಿಸಿದರು.

ಈ ವೇಳೆ ಮಾತನಾಡಿದ ನವೀನ್ ಕಿರಣ್, ನವರಾತ್ರಿ ಹಬ್ಬದಲ್ಲಿ ದುರ್ಗಾಷ್ಟಮಿಯಂದು ದುರ್ಗೆಯ ಪೂಜೆ ಮಾಡುವುದು ನಮ್ಮ ಸಾಂಪ್ರದಾಯ. ಕ್ಯಾಂಪಸ್ ನಲ್ಲಿರುವ ಗಣಪತಿ ದೇವಾಲಯದಲ್ಲಿ ಪ್ರತಿ ವರ್ಷ ಈ ಪೂಜಾ ಕಾರ್ಯಕ್ರಮ ಮಾಡುತ್ತಿದ್ದು, ಇಂದು ಚಂಡಿಕಾ ಯಾಗ, ಲಲಿತಾ ಸಹಸ್ರ ನಾಮ ಪಟನೆ ಮತ್ತು ಪೂಜೆ ಮಾಡಲಾಗಿದೆ. ಈ ಪೂಜೆಯಲ್ಲಿ ೪೦೦ ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದು, ಅವರಿಗೆ ಸಂಪೂರ್ಣ ಪೂಜಾ ಸಾಮಗ್ರಿಗಳನ್ನು ದೇವಾಲಯ ಮಂಡಳಿಯಿ0ದ ಕೊಟ್ಟು ಲೋಕಕಲ್ಯಾಣಕ್ಕಾಗಿ ಮಾಡುವ ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ನೂರಾರು ಮಹಿಳೆಯರು ಸಾಲಾಗಿ ಕುಳಿತು ಪುರೋಹಿತರ ಮಂತ್ರ ಪಟನೆಗಳನ್ನು ಹೇಳಿದಂತೆ ಮಾಡುತ್ತಾ ದೇವಸ್ಥಾನ ಮಂಡಳಿ ನೀಡಿದ್ದ ಪೂಜಾ ಸಾಮಗ್ರಿಗಳಲ್ಲಿ ಪೂಜೆ ಸಲ್ಲಿಸಿದರು. ದುರ್ಗಾ ದೇವಿ ಪೂಜೆ, ಚಡಿಂಕಾ ಹೋಮ ಸಿವಿವಿ ದತ್ತಿಯ ಅಧ್ಯಕ್ಷ ಕೆ.ವಿ ನವೀನ್ ಕಿರಣ್ ನೇತೃತ್ವದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ದೇವರ ದರ್ಶನ ಪಡೆದಿದ್ದು ಸಂತಸ ತಂದಿದೆ ಎಂದು ಭಕ್ತಾದಿಗಳು ಹರ್ಷ ವ್ಯಕ್ತಪಡಿಸಿದರು.

ಚಂಡಿಕಾ ಹೋಮ ಹಾಗೂ ಸಾಮೂಹಿಕ ಲಲಿತಾ ಸಹಸ್ರನಾಮ ಪಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರಿಗೆ ಸ್ವತಃ ಸಿವಿವಿ ದತ್ತಿಯ ಅಧ್ಯಕ್ಷ ನವೀನ್ ಕಿರಣ್ ಪ್ರಸಾದ ವಿನಿಯೋಗ ಮಾಡಿದರು.

About The Author

Leave a Reply

Your email address will not be published. Required fields are marked *