ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ
1 min read
ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ
ಗ್ರಾಮ ತೊರೆಯುತ್ತಿರುವ ಸಾಲಗಾರರು
ಮನೆಗಳ ಮುಂಭಾಗದಲ್ಲಿ ನಾಮಫಲಕ ಅಳವಡಿಸಿ ಗೌರವಕ್ಕೆ ಧಕ್ಕೆ
ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿರುವ ಪ್ರಕರಣ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ಹುಲ್ಲಹಳ್ಳಿ, ರಾಂಪುರ ಕುರಿಹುಂಡಿ, ಶಿರಮಳ್ಳಿ ಕಗ್ಗಲೂರು ಹೆಗ್ಗಡಹಳ್ಳಿ ಮುದ್ದಹಳ್ಳಿ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಕುಟುಂಬಗಳು ಗ್ರಾಮ ತೊರೆಯುತ್ತಿವೆ.
ಮೈಕ್ರೋ ಫೈನಾನ್ಸ್ಗಳವರು ಸಾಲ ಪಡೆದ ಕುಟುಂಬಗಳ ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಕೆಲ ಮನೆಗಳಿಗೆ ಬೀಗ ಹಾಕಿಕೊಂಡು ಕುಟುಂಬದವರನ್ನು ಹೊರದಬ್ಬಿರುವ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದ ಪರಿಣಾಮ ಕೆಲ ಕುಟುಂಬಸ್ಥರು ಸಾವು ನೋವು ಸಂಭವಿಸಿದಲ್ಲಿ ಭಾಗವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲೆಡೆ ಗ್ರಾಮೀಣ ಪ್ರದೇಶದ ಜನತೆ ಸಂಕ್ರಾ0ತಿ ಹಬ್ಬವನ್ನು ಸಂಭ್ರಮದಿ0ದ ಆಚರಿಸುತ್ತಿದ್ದರೆ. ಈ ಗ್ರಾಮದ ಕೆಲ ಕುಟುಂಬಗಳು ಮೈಕ್ರೋ ಫೈನಾನ್ಸ್ ಹಾವಳಿಗೆ ಬೆದರಿ ಗ್ರಾಮದತ್ತ ಮುಖ ತೋರಿಸಲು ಸಾಧ್ಯವಾಗದಂತಾಗಿದೆ.ಆಮಿಷಗಳನ್ನ ಒಡ್ಡಿ ಬಲವಂತವಾಗಿ ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನ ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಆರೋಪಿಸುತ್ತಿರುವ ಸ್ಥಳೀಯರು ಇಂತಹ ಬೆಳವಣಿಗೆಗಳಿಗೆ ಮೂಗುದಾರ ಹಾಕುವಂತೆ ಒತ್ತಾಯಿಸಿದ್ದಾರೆ.