ಸಂಕ್ರಾ0ತಿ ವ್ಯಾಪಾರವಿಲ್ಲದೆ ಸೊರಗಿದ ವ್ಯಾಪಾರಿಗಳು
1 min readಸಂಕ್ರಾ0ತಿ ವ್ಯಾಪಾರವಿಲ್ಲದೆ ಸೊರಗಿದ ವ್ಯಾಪಾರಿಗಳು
ಹೊಲದಲ್ಲಿ ಅವರೇ ಇಲ್ಲ, ತೋಟದಲ್ಲಿ ಹೂವಿಲ್ಲ
ಸುಗ್ಗಿಹಬ್ಬ ಮಕರ ಸಂಕ್ರಾ0ತಿ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ಕಬ್ಬು, ಗೆಣಸು, ಅವರೇಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು ಖರೀದಿ ಕಡೆಗೆ ಗ್ರಾಹಕರು ನಿರುತ್ಸಾಹ ತೋರುತ್ತಿದ್ದಾರೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದರು.
ಸಂಕ್ರಾ0ತಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಹಿವಾಟು ಕಡಿಮೆ ಇದ್ದು, ಈ ಬಾರಿ ರೈತರ ಹೊಲಗಳಲ್ಲಿ ಅವರೇಕಾಯಿ ಬೆಳೆಯದ ಕಾರಣ, ವ್ಯಾಪಾರಿಗಳು, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಖರೀದಿ ಮಾಡಿ ತಂದು ಮಾರಾಟ ಮಾಡುತ್ತಿದ್ದಾರೆ. ಕಬ್ಬು ಒಂದು ಜಲ್ಲೆ 50 ರೂಪಾಯಿ, ಗೆಣಸು ಕೆಜಿ ೫೦, ಕಡಲೇಕಾಯಿ 100 ಸಾಮ್ರಾಟ್ ಕಡಲೇಕಾಯಿ 120, ಅವರೆಕಾಯಿ ಒಂದೂವರೆ ಕೆಜಿ 100 ರೂಪಾಯಿಗೆ ಮಾರಾಟವಾಗುತ್ತಿದ್ದು, ಮಂಗಳವಾರ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಇನ್ನು ಹೂವಿನ ವಿಚಾರಕ್ಕೆ ಬಂದರೆ ಗುಲಾಬಿ ಹೂ 160 ಇದ್ದ ಬೆಲೆ ಈಗ 200, ಕನಕಾಂಬರ 1,500, ಕಾಕಡಾ 600, ಚೆಂಡು ಹೂ 60, ಸೇವಂತಿಗೆ 240 ರೂಪಾಯಿ ಆಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ವ್ಯಾಪಾರಿಗಳು, ಸರಕುಸಾಗಾಣೆ ವಾಹನಗಳನ್ನು ಸಿದ್ಧಪಡಿಸಿಕೊಂಡು, ಹಳ್ಳಿ, ಹಳ್ಳಿಗೂ ಹೋಗಿ, ಗೆಣಸು, ಕಡಲೇಕಾಯಿ, ಅವರೆಕಾಯಿ, ಕಬ್ಬು, ಹೂವು, ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕಾರಣ, ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಖರೀದಿ ಮಾಡುತ್ತಿದ್ದ ಬಹುತೇಕ ಗ್ರಾಹಕರು ಪಟ್ಟಣಕ್ಕೆ ಬಾರದೇ ಹಳ್ಳಿಗಳಲ್ಲೆ ಖರೀದಿ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದ ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಬಂಡವಾಳ ಹೂಡಿಕೆ ಮಾಡಿರುವ ವ್ಯಾಪಾರಿಗಳು, ಗ್ರಾಹಕರ ಕೊರತೆ ಎದುರಿಸುತ್ತಿದ್ದು, ಹಾಕಿರುವ ಬಂಡವಾಳ ವಾಪಸ್ ಬರುತ್ತೋ ಇಲ್ಲವೋ ಅನ್ನುವ ಭೀತಿಯಲ್ಲಿದ್ದಾರೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನ ತನ್ನ ಪಥ ಬದಲಾವಣೆಗೆ ಸಂಬ0ಧಿಸಿದ ಹಬ್ಬವೇ ಮಕರ ಸಂಕ್ರಮಣ ಅಥವಾ ಸಂಕ್ರಾ0ತಿ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವುದು, ಉತ್ತರಾಭಿಮುಖವಾಗಿ ಪರಿಭ್ರಮಣ ಪ್ರಾರಂಭಿಸುವುದರಿ0ದ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ರೈತರಿಗೆ ಸುಗ್ಗಿಯ ಹಬ್ಬ, ಬೆಳೆಗಳನ್ನು ಕೊಯ್ಲು ಮಾಡಿ ಕಣಗಳಲ್ಲಿ ಹಾಕಿ ಕಾಳು ಮಾಡುತ್ತಾರೆ. ಫಸಲನ್ನುಸಂಗ್ರಹಿಸಿ ರಾಶಿಗೆ ಪೂಜೆ ಮನೆಗೆ ಕೊಂಡೊಯ್ಯುವರು. ಜಾನುವಾರುಗಳಿಗೆ ವಿಶೇಷ ಆಲಂಕಾರ ಮಾಡಿ ಮೆರವಣಿಗೆ ಹಾಗೂ ಬೆಂಕಿ ಹಾಯಿಸಿ ಸಂಭ್ರಮಿಸುತ್ತಾರೆ.