ಚಿಕ್ಕಬಳ್ಳಾಪುರದಲ್ಲಿ ಮೆಗಾಸ್ಟಾರ್ ಚಿರಂಜೀವಿ 69ನೇ ಜನ್ಮದಿನ ಆಚರಣೆ
1 min readಚಿಕ್ಕಬಳ್ಳಾಪುರದಲ್ಲಿ ಮೆಗಾಸ್ಟಾರ್ ಚಿರಂಜೀವಿ 69ನೇ ಜನ್ಮದಿನ ಆಚರಣೆ
ಅಭಿಮಾನಿಗಳಿಂದ ಚಿಕ್ಕಬಳ್ಳಾಪುರದಲ್ಲಿ ಆಚರಣೆ
ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು
ಮೆಗಾಸ್ಟಾರ್, ಪದ್ಮವಿಭೂಷಣ ಚಿರಂಜೀವಿ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರು. ಚಿಂಕ್ಕಬಳ್ಳಾಪುರ ಆಂಧ್ರಪ್ರದೇಶದ ಗಡಿಗೆ ಹೊಂದಿಕೊ0ಡಿದ್ದು, ಆಂಧ್ರದ ಸಿನಿಮಾ ಪ್ರಭಾವ ಸ್ವಲ್ಪ ಹೆಚ್ಚಾಗಿಯೇ ಇರುವ ಹಿನ್ನೆಲೆಯಲ್ಲಿ ಚಿರಂಜೀವಿ ಹುಟ್ಟುಹಬ್ಬ ಅದ್ಧೂರಿಯಾಗಿ ಆಛರಿಸಲಾಯಿತು.
ಹೌದು, ಮೆಗಾಸ್ಟಾರ್ ಎಂದರೆ ಚಿಕ್ಕಬಳ್ಳಾಪುರದಲ್ಲಿ ಹುಚ್ಚು ಅಭಿಮಾನಿಗಳಿದ್ದಾರೆ. ಚಿರಂಜೀವಿ ಒಬ್ಬ ನಟನಾಗಿ ಮಾತ್ರವಲ್ಲದೆ, ಸಮಾಜ ಸೇವೆಯಲ್ಲಿಯೂ ಅಗ್ರಗಣ್ಯರಾಗಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಚಿರಂಜೀವಿ ಐ ಬ್ಯಾಂಕ್, ಚಿರಂಜೀವಿ ಆಕ್ಸಿಜನ್ ಬ್ಯಾಂಕ್ ಹೀಗೆ ಹಲವು ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ನಟ ಚಿರಂಜೀವಿ, ಅದೆಷ್ಟೋ ಮಂದಿ ಅಂದರ ಬಾಳಿಗೆ ಬೆಳಕಾಗಿದ್ದಾರೆ.
ಅಲ್ಲದೆ ರಕ್ತದಾನದ ಮೂಲಕ ಪ್ರಖ್ಯಾತಿ ಪಡೆದಿರುವ ಚಿರಂಜೀವಿ ಅಭಿಮಾನಿಗಳು ಸದಾ ಸಹಾಯಕ್ಕೆ ಮುಂದೆ ಇರುತ್ತಾರೆ. ಮೆಗಾಸ್ಟಾರ್ ಚಿರಂಜೀವಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಇಂದಿಗೂ ತಮ್ಮ ಅಭಿನಯ ಮುಂದುವರಿಸಿದ್ದಾರೆ. ಅಲ್ಲದೆ ಪ್ರಜಾರಾಜ್ಯಂ ಪಕ್ಷ ಕಟ್ಟಿ, ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಚಿರಂಜೀವಿ ಇದೀಗ ರಾಜಕೀಯದಿಂದ ವಿಮುಖರಾಗಿ ಅಭಿನಯದಲ್ಲಿಯೂ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿರಂಜೀವಿ ಅವರಿಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮಾತ್ರವಲ್ಲದೆ, ಇಡೀ ದೇಶ ಮತ್ತು ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದು, ಅವರ ಹುಟ್ಟುಹಬ್ಬ ಬಂದರೆ ರಕ್ತದಾನ ಮಾಡುವುದು, ನೇತ್ರದಾನ ಮಾಡುವ ಕಾರ್ಯದಲ್ಲಿ ಅವರ ಅಭಿಮಾನಿಗಳು ಸದಾ ತೊಡಗಿದ್ದಾರೆ. ಇಂದು ಚಿರಂಜೀವಿ ಅವರ 69ನೇ ಜನ್ಮದಿನವಾಗಿದ್ದು, ಚಿಕ್ಕಬಳ್ಳಾಪುರದ ಚಿರಂಜೀವಿ ಅಭಿಮಾನಿಗಳು ನಗರದ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಚಿರಂಜೀವಿ ಹೆಸರಿನಲ್ಲಿ ಅರ್ಚನೆ ಮಾಡಿಸಿ ಅಭಿಮಾನ ಮೆರೆದರು.
ಅಲ್ಲದೆ ಸುಮಾರು 20 ವರ್ಷಗಳ ಹಿಂದೆ ಬಿಡುಗಡೆಯಾಗಿ, ಆಗಿನ ಕಾಲದಲ್ಲಿ ಇಡೀ ದೇಶದಲ್ಲಿಯೇ ಖ್ಯಾತಿ ಪಡೆದಿದ್ದ ಇಂದ್ರ ಸಿನಿಮಾವನ್ನು ಇಂದು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಮರು ಪ್ರದರ್ಶನ ಮಾಡಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.