ಇಟಲಿಯಲ್ಲಿ ಮೆಗಾ ಪ್ರಿನ್ಸ್ ಕಲ್ಯಾಣ! ವರುಣ್ ತೇಜ್-ಲಾವಣ್ಯ
1 min readನಾಗಬಾಬು ಪುತ್ರ, ಮೆಗಾ ಪ್ರಿನ್ಸ್ ವರುಣ್ ತೇಜ್ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು. ವರುಣ್ ಲಾವಣ್ಯ ತ್ರಿಪಾಠಿ ಜೂನ್ 09 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ನವೆಂಬರ್ 1 ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿಯ ಮದುವೆಗೆ ಸಂಬಂಧಿಸಿದಂತೆ ಹಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ. ಈ ಮದುವೆಗೆ ನಾಗಬಾಬು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಲಾವಣ್ಯ ತ್ರಿಪಾಠಿ ಧರಿಸಿರುವ ಮದುವೆಯ ಸೀರೆ 10 ಲಕ್ಷ ರೂಪಾಯಿ ಎಂದು ವರದಿಯಾಗಿದೆ.
ಈ ಮದುವೆ ಸಮಾರಂಭಕ್ಕೆ ನಾಗಬಾಬು 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.ಮದುವೆ ವಿಚಾರದಲ್ಲಿ ನಾಗಬಾಬು ಯಾವುದೇ ರಾಜಿ ಮಾಡಿಕೊಂಡಿಲ್ಲ ಎನ್ನಲಾಗಿದೆ. ಮಗನ ಮದುವೆಗೆ ಭರ್ಜರಿಯಾಗಿಯೇ ದುಡ್ಡು ಖರ್ಚು ಮಾಡಿದ್ದಾರೆ.
ಸದ್ಯ ವರುಣ್ ತೇಜ್ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ ಇದೆ. ಆಪರೇಷನ್ ವ್ಯಾಲೆಂಟೈನ್ ಜೊತೆಗೆ ಮಟ್ಕಾ ಎಂಬ ಇನ್ನೊಂದು ಸಿನಿಮಾದಲ್ಲಿ ವರುಣ್ ತೇಜ್ ನಟಿಸುತ್ತಿದ್ದಾರೆ. ನಟ ವರುಣ್ ತೇಜ್ ಹಿಟ್ ಸಿನಿಮಾಗಾಗಿ ಕಾಯ್ತಿದ್ದಾರೆ.
ಮದುವೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ಗ್ಲೋಬಲ್ ಸ್ಟಾರ್ ರಾಮ್ ಚರಣ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಸಾಯಿ ಧರಂ ತೇಜ್, ಅಲ್ಲು ಶಿರೀಶ್, ವೈಷ್ಣವ್ ತೇಜ್ ಮತ್ತು ನಿತಿನ್ ಭಾಗವಹಿಸಿದ್ದರು.
ಮದುವೆಯಲ್ಲಿ ನಟ ವರುಣ್ ತೇಜ್ ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಲೈಟ್ ಗೋಲ್ಡನ್ ಕಲರ್ ಶೇರ್ವಾನಿಯನ್ನು ಧರಿಸಿದ್ದರು. ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಾಂಚೀಪುರಂ ಸೀರೆಯನ್ನೂ ಲಾವಣ್ಯ ಮಿಂಚುತ್ತಿದ್ದರು. ಅಶ್ವಿನ್ ಮಾವ್ಲೆ ಮತ್ತು ಹಸನ್ ಖಾನ್ ಈ ಜೋಡಿ ಶೃಂಗಾರಗೊಳಿಸಿದ್ರು.
ಇದು ಮೆಗಾಸ್ಟಾರ್ ಹಾಗೂ ಲಾವಣ್ಯ ಕುಟುಂಬಗಳು ವರುಣ್ ತೇಜ್ – ಲಾವಣ್ಯ ತ್ರಿಪಾಠಿ ಅವರ ಮದುವೆಗಾಗಿ ಇಟಲಿಯ ಸಿಯೆನಾದಲ್ಲಿರುವ ಬೋರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್ ವಾಸವಾಗಿದ್ರು. ಮದುವೆ ಅಂಗವಾಗಿ ಸೋಮವಾರ ಕಾಕ್ ಟೇಲ್ ಪಾರ್ಟಿ ಹಾಗೂ ಹಳದಿ ಕಾರ್ಯಕ್ರಮ ನಡೆದಿತ್ತು ಇದಕ್ಕೆ ಸಂಬಂಧಿಸಿದ ಚಿತ್ರಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.