ರೈತರ ಸಾಗುವಳಿ ಚೀಟಿ ವಿತರಣೆಯಲ್ಲಿ ಮೀನಮೇಶ
1 min readರೈತರ ಸಾಗುವಳಿ ಚೀಟಿ ವಿತರಣೆಯಲ್ಲಿ ಮೀನಮೇಶ
ವಸತಿ ಸಮಸ್ಯೆ, ದಲಿತರ ಮೇಲೆ ಹಲ್ಲೆ ವಿರುದ್ಧ ಹೋರಾಟದ ಎಚ್ಚರಿಕೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯ ವಿವಿಧ ಸಹ ಸಮಿತಿಗಳನ್ನು ರಚಿಸುವ ಕುರಿತು ಚರ್ಚಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಾಗಮಂಗಲ ವೆಂಕಟೇಶ್ ಹೇಳಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ನಾಗಮಂಗಲ ವೆಂಕಟೇಶ್, ಜಿಲ್ಲಾ ಸಂಚಾಲಕ ರಾಮಮೂರ್ತಿ ನೇರಳಘಟ್ಟ ನೇತೃತ್ವದಲ್ಲಿ ಸಂಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿ ತಾಲೂಕಿನ ವ್ಯಾಪ್ತಿಗೆ ಉಪ ಸಮಿತಿಗಳ ರಚನೆಗೆ ಮುಂದಾಗಿದೆ, ತಾಲೂಕು ಸಮಿತಿ, ಕಾರ್ಯಕಾರಿ ಸಮಿತಿ, ಮಹಿಳಾ ಸಮಿತಿ, ನೌಕರರ ಸಮಿತಿ, ವಿದ್ಯಾರ್ಥಿ ಸಮಿತಿ, ಅಲ್ಪಸಂಖ್ಯಾತರ ಸಮಿತಿ, ಕಲಾತಂಡ ಸಮಿತಿಗಳಿಗೆ ಅರ್ಹ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಬೆ0ಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ತಾಲೂಕುಗಳಿದ್ದು, ಪ್ರತಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿ ಜಿಲ್ಲಾ ಸಂಚಾಲಕ ರಾಮಮೂರ್ತಿ ನೇರಳಘಟ್ಟ ಅವರಿಗೆ ವಹಿಸಲಾಗಿದೆ. ಸಂಘಟನೆಯಿ0ದ ಮತ್ತಷ್ಟು ಸಮಾಜಮುಖಿ ಹೋರಾಟಗಳು ನಡೆಯಬೇಕಿದೆ. ಜಿಲ್ಲೆಯಲ್ಲಿ ರೈತರ ಸಾಗುವಳಿ ಚೀಟಿ ವಿತರಣಾ ಸಮಸ್ಯೆ, ವಸತಿ ಸಮಸ್ಯೆ, ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳ ವಿರುದ್ಧವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ ಎಂದರು.