ಉತ್ತಮ ಆರೋಗ್ಯಕ್ಕೆ ನಿತ್ಯ 10 ನಿಮಿಷ ಧ್ಯಾನ ಮಾಡಿ
1 min readಉತ್ತಮ ಆರೋಗ್ಯಕ್ಕೆ ನಿತ್ಯ 10 ನಿಮಿಷ ಧ್ಯಾನ ಮಾಡಿ
ವಿಶ್ವ ಧ್ಯಾನ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ರವೀಂದ್ರ
ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಧ್ಯಾನ ದಿನಾಚರಣೆ
ಪ್ರತಿಯೊಬ್ಬರು ಪ್ರತಿದಿನ ೧೦ ನಿಮಿಷ ಧ್ಯಾನ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮಕಾರಿ ಉಪಯೋಗಗಳು ಲಭಿಸಲಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕಬಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಧ್ಯಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಜಿಲಲಾಧಿಕಾರಿ ಪಿ.ಎನ್. ರವೀಂದ್ರ, ಗರ್ಧಾವಸ್ಥೆಯ ಶಿಶುವಿನಿಂದ ಜೀವನದ ಅಂತ್ಯದವರೆಗೂ ಎಲ್ಲರಿಗೂ ಧ್ಯಾನದ ಅತ್ಯವಶ್ಯಕತೆ ಇದೆ. ಧ್ಯಾನದ ಪೂರ್ವದಲ್ಲಿ, ಧ್ಯಾನಾವಸ್ಥೆಯ ಅವಧಿಯಲ್ಲಿ ಮತ್ತು ಧ್ಯಾನದ ನಂತರ ವಿಭಿನ್ನ ಅನುಭವ ನಮಗೆ ಲಭಿಸಲಿದೆ ಎಂದರು.
ಧ್ಯಾನ ಅಘಾದವಾದ ಅದಮ್ಯ ಶಕ್ತಿಯನ್ನು ನೀಡುತ್ತದೆ. ಧ್ಯಾನ ಮಾಡುವುದರಿಂದ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಸಕ್ರಿಯಗೊಳಿಸುತ್ತದೆ. ವೈಯಕ್ತಿಕ ಪ್ರಯೋಜನಗಳನ್ನು ಮೀರಿ, ಸಾಮೂಹಿಕ ಧ್ಯಾನ ಮಾನಸಿಕ ಶಾಂತಿ ನೀಡುತ್ತದೆ. ಧ್ಯಾನ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಿಸಿ ಪ್ರಶಾಂತತೆಯನ್ನ ಮೂಡಿಸುತ್ತದೆ ಎಂದರು.
ಮನಸ್ಸಿನ ಭಾವನೆಯ ಏರುಪೇರುಗಳನ್ನು ಸಮಾಧಾನದ ಸ್ಥಿತಿಯಲ್ಲಿ ಗ್ರಹಿಸಬಹುದು. ಸಮಾಧಾನದ ಅವಸ್ಥೆಗೆ ಧ್ಯಾನದ ಅಗತ್ಯವಿದೆ. ಸಮಚಿತ್ತದ ಭಾವನೆ ಮೂಡಿದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಧ್ಯಾನ ಏಕಾಗ್ರತೆಯನ್ನು ಸಾಧಿಸಲು ಸಹಾಯಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರ. ಆಡಳಿತ ವರ್ಗದ ಅಧಿಕಾರಿಗಳು, ಉದ್ಯೋಗಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಧ್ಯಾನ ಸಹಕಾರಿ. ನಿವೃತ್ತರಿಗೆ ವಿಶ್ರಾಂತಿ ಜೀವನ ನಡೆಸಲು ಧ್ಯಾನ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಕೆಲಸದ ಒತ್ತಡ ನಿವಾರಿಸಲು ಧ್ಯಾನ ಸಮರ್ಥವಾಗಿ ಸಹಕಾರಿಯಾಗಲಿದೆ. ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಪ್ರತಿದಿನ ೧೦ ನಿಮಿಷ ಬೆಳಿಗ್ಗೆ ಅಥವಾ ರಾತ್ರಿ ` ಮಾಡುವುದಕ್ಕೆ ಸಮಯ ಮೀಸಲಿಟ್ಟು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ದೇಹದ ರಕ್ತದೊತ್ತಡ, ಮದುಮೇಹ, ಥೈರಾಯಿಡ್, ಹೃದಯ ಸಂಬ0ಧಿ ಕಾಯಿಲೆಗಳು ಸೇರಿದಂತೆ ಎಲ್ಲ ಕಾಯಿಲೆಗಳಿಗೆ ಧ್ಯಾನ ಮೂಲ ಪರಿಹಾರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧ್ಯಾನ ತಜ್ಞರ ಸೂಚನೆಗಳಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್. ಎಂ.ಜಗದೀಶ, ತಹಶಿರ್ಲ್ದಾ ಅನಿಲ್ ಧ್ಯಾನ ಮಾಡಿದರು.