ನಂಜನಗೂಡಿನಲ್ಲಿ ದಲಿತ ಸಂಘಟನೆಗಳಿ0ದ ಬೃಹತ್ ಹೋರಾಟ
1 min readಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ
ನಂಜನಗೂಡಿನಲ್ಲಿ ದಲಿತ ಸಂಘಟನೆಗಳಿ0ದ ಬೃಹತ್ ಹೋರಾಟ
ರಾಜ್ಯ ಆದಿಜಾಂಬವ ಮತ್ತು ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದಿಂದ ಎಜೆ ಸದಾಶಿವ ಆಯೋಗ ನೀಡಿರುವ ವರದಿಯಂತೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಂಜನಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತಲುಪಿದರು.
ರಾಜ್ಯ ಆದಿಜಾಂಬವ ಮತ್ತು ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದಿಂದ ಎಜೆ ಸದಾಶಿವ ಆಯೋಗ ನೀಡಿರುವ ವರದಿಯಂತೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಂಜನಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತಲುಪಿದರು. ಪರಿಶಿಷ್ಟ ಜಾತಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ಆರ್ಥಿಕ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು. ನಮ್ಮ ಹಕ್ಕಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ 7 ಮಂದಿ ನ್ಯಾಯ ಪೀಠ ಸಂವಿಧಾನಬದ್ಧವಾಗಿ ಆಯಾ ರಾಜ್ಯದವರು ಒಳ ಮೀಸಲಾತಿ ನೀಡಬೇಕೆಂದು ಆದೇಶ ನೀಡಿದೆ.
ರಾಜ್ಯ ಸರ್ಕಾರ ಮಾದಿಗ ಸಮುದಾಯವನ್ನು ತೀವ್ರ ನಿರ್ಲಕ್ಯ ವಹಿಸಿ ಮಾದಿಗ ವಿರೋಧಿ ಸರ್ಕಾರವಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕೆಂದು ಸಂವಿಧಾನಬದ್ಧವಾಗಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು. ನಂತರ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಆನಂದ್ ಸ್ವಾಮಿ, ರಾಜೇಶ್, ಪ್ರಸನ್ನ, ದೇವರಾಜ್, ಕುಮಾರ್, ಚಂದ್ರು, ಮಂಗಳಮ್ಮ, ವಿಜಯಲಕ್ಷ್ಮಿ ಕುಮಾರ್, ಮಧುರಾಜ್ ಇದ್ದರು.