ಮಾರ್ಕ್ ಜುಕರ್‌ಬರ್ಗ್ ಸೆಲೆಬ್ರೇಷನ್ ವೀಡಿಯೊ ನೋಡಿ ಛೇಡಿಸಿದ ಎಲಾನ್ ಮಸ್ಕ್!
1 min readಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 248ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವ ವೀಡಿಯೊವೊಂದನ್ನು ಮಾರ್ಕ್ ಜುಕರ್‌ಬರ್ಗ್ ಜುಲೈ 4ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರು ಒಂದು ಕೈಯಲ್ಲಿ ಅಮೇರಿಕಾದ ಧ್ವಜವನ್ನು ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಕ್ಯಾನ್ ಅನ್ನು ಹಿಡಿದುಕೊಂಡು ಬಿಯರ್ ಕುಡಿಯುತ್ತಾ ಸರ್ಫಿಂಗ್ ಮಾಡುತ್ತಿರುವ ಕ್ಲಿಪ್ ಇದೆ.
ಈ ವೀಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಾರ್ಕ್ ಜುಕರ್‌ಬರ್ಗ್ ಅವರ ಈ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಕೆಲವರು ಅವರ ಪರವಾಗಿ ಹಾಗೂ ಮತ್ತೆ ಕೆಲವರು ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಮಾರ್ಕ್ ಅವರ ಈ ಪೋಸ್ಟ್ಗೆ ಎಲೋನ್ ಮಸ್ಕ್ ಕೂಡ ಕಾಮೆಂಟ್ ಮಾಡಿದ್ದಾರೆ. ಸದಾ ಒಂದಲ್ಲಾ ಒಂದು ಹೊಸ ಹೇಳಿಕೆಗಳನ್ನು ನೀಡಿ ಮಸ್ಕ್ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.
ಈಗ ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿರುವ ಮಾರ್ಕ್ ಜುಕರ್‌ಬರ್ಗ್ ಅವರ ವೀಡಿಯೊವನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ತಮ್ಮ ಪ್ರತಿಕ್ರಿಯೆಯನ್ನು ಎಕ್ಸ್ನಲ್ಲಿ ನೀಡಿದ್ದಾರೆ. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸರ್ಫಿಂಗ್ ಮಾಡುವಾಗ ಅವರು ಮೋಜನ್ನು ಮುಂದುವರಿಸಬಹುದು ಆದರೆ ನನ್ನ ಮೊದಲ ಆದ್ಯತೆ ಕೆಲಸಕ್ಕೆ, ಆದ್ದರಿಂದ ನಾನು ಕೆಲಸ ಮಾಡಲು ಬಯಸುತ್ತೇನೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.