ಮಾವಿನ ಮರಗಳ ಮಾರಣ ಹೋಮ
1 min read
ಮಾವಿನ ಮರಗಳ ಮಾರಣ ಹೋಮ
ಜಮೀನು ವಿವಾದಕ್ಕೆ 30 ಮಾವಿನ ಮರ ಬಲಿ
ಸುಮಾರು ೩೦ ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಮಾವಿನ ಮರಗಳನ್ನು ಕತ್ತರಿಸಿರುವ ಮರುಣ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಿಂಬಾಲು ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸಪುರ ತಾಲೂಕಿನ ದಿಂಬಾಲು ಗ್ರಾಮದ ರಾಜೇಶ್ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಪಕ್ಕದ ಜಮೀನಿನ ಮಾಲೀಕ ಬೈರೆಡ್ಡಿ, ಸಿದ್ದಾರ್ಥ್, ಶ್ರೀರ್ ಹಾಗೂ ಶ್ರೀನಿವಾಸ್ ಎಂಬವರು ಜಮೀನು ತಮಗೆ ಸೇರುತ್ತೆ ಎಂದು ಮರಗಳನ್ನು ಕಟಾವು ಮಾಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.
ಪಕ್ಕದ ಜಮೀನು ಮಾಲೀಕರು ತಮಗೆ ಸೇರುತ್ತೆ ಎಂಬ ವಿಚಾರಕ್ಕೆ ಸಂಬ0ಧಿಸಿ ಸರ್ವೆ ಇಲಾಖೆಗೆ ಮನವಿ ಸಲ್ಲಿಸಿ, ಸರ್ವೆ ಮಾಡಿಸಿರುತ್ತಾರೆ. ಸರ್ವೆ ಮಾಡಿದ ವೇಳೆ ಅವರು ಸ್ಥಳದಲ್ಲೇ ಇದ್ದು, ಸಹಿ ಮಾಡಿರುತ್ತಾರೆ. ನಂತರ ಯಾವುದೇ ಮಾತುಕತೆ ಮಾಡದೆ ಏಕಾಏಕಿ ಸುಮಾರು ೩೦ಕ್ಕೂ ಹೆಚ್ಚು ಮರಗಳನ್ನು ಕಟಾವು ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಮರ ಕಟಾವು ಮಾಡಿದವರ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ನ್ಯಾಯ ದೊರಕಿಸಿಕೊಡಬೇಕು. ಸಂಬ0ಧಪಟ್ಟ ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.