ವೃತ್ತಿ ಬದುಕಿಗೆ ಹಲವು ಭಾಷಾಜ್ಞಾನ ಅಗತ್ಯ
1 min readವೃತ್ತಿ ಬದುಕಿಗೆ ಹಲವು ಭಾಷಾಜ್ಞಾನ ಅಗತ್ಯ
ಶಿಷ್ಯವೇತನ ವಿತರಿಸಿದ ಗಂಗಾಧರ ದೇವರಮನೆ
ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಮುಖ್ಯ ಪಾತ್ರ ವಹಿಸುತ್ತದೆ. ಪ್ರಸ್ತುತ ಒಂದು ಭಾಷೆಗೆ ಸೀಮಿತವಾಗಿರದೆ, ಹಲವು ಭಾಷಾಜ್ಞಾನ ಬೆಳೆಸಿಕೊಳ್ಳಬೇಕು. ಇದು ಮುಂದಿನ ವೃತ್ತಿ ಬದುಕಲ್ಲಿ ಬಹು ಮುಖ್ಯ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರ ಮನೆ ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಮುಖ್ಯ ಪಾತ್ರ ವಹಿಸುತ್ತದೆ. ಪ್ರಸ್ತುತ ಒಂದು ಭಾಷೆಗೆ ಸೀಮಿತವಾಗಿರದೆ, ಹಲವು ಭಾಷಾಜ್ಞಾನ ಬೆಳೆಸಿಕೊಳ್ಳಬೇಕು. ಇದು ಮುಂದಿನ ವೃತ್ತಿ ಬದುಕಲ್ಲಿ ಬಹು ಮುಖ್ಯ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರ ಮನೆ ಹೇಳಿದರು. ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಜಯಣ್ಣ ಕನ್ವೆನ್ಷನ್ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರರಿಸಿ ಮಾತನಾಡಿದ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರ ಮನೆ, ಮಕ್ಕಳಿಗೆ ಭಾಷಾ ಜ್ಞಾನ ಅತಿ ಮುಖ್ಯ ಎಂದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ. ಮಾತನಾಡಿ, ರಾಜ್ಯದಲ್ಲಿ 96,854 ವಿದ್ಯಾರ್ಥಿಗಳು ಈವರೆಗೆ ಶಿಷ್ಯವೇತನ ಪಡೆಯುತ್ತಿದ್ದು, 114 ಕೋಟಿ ವಿತರಿಸಲಾಗಿದೆ. ವಿದ್ಯಾರ್ಥಿಗಳು ಈ ಮೊತ್ತವನ್ನು ಉತ್ತಮ ರೀತಿಯಲ್ಲಿ ವಿನಿಯೋಗಿಸುವಂತೆ ಮಾರ್ಗದರ್ಶನ ನೀಡಿದರು.ಹಿರಿಯ ವಕೀಲ ದನಪಾಲ್ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಿ,
ವಿದ್ಯಾರ್ಥಿ ಜೀವನ ಅಮೂಲ್ಯವಾದದು, ತಂದೆ -ತಾಯಿಗೆ ಗೌರವ, ಗುರು- ಹಿರಿಯರಲ್ಲಿ ಭಕ್ತಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಯೋಜನೆಯ ಜಿಲ್ಲಾನಿರ್ದೇಶಕ ಸತೀ ಸುವರ್ಣ ಮಾತನಾಡಿದರು.