ಮಾಲೂರು ತಾ. ಟೇಕಲ್ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ
1 min readಮಾಲೂರು ತಾಲೂಕಿನ ಟೇಕಲ್‌ನ ಕೆ.ಜಿ ಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜನ ಸೇವಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದು ಶಾಸಕ ಕೆ ವೈ ನಂಜೇಗೌಡ ಭಾಗವಹಿಸಿದ್ರು,
ಈ ವೇಳೆ ಶಾಸಕ ಕೆ ವೈ ನಂಜೇಗೌಡ ಮಾತನಾಡಿ, ಕನ್ನಡ ಪರ ಸಂಘಟನೆಗಳು ನೆಲ ಜಲ ಭಾಷೆಗೆ ಧಕ್ಕೆ ಆದಾಗ ಹೋರಾಟ ಮಾಡುವುದರ ಜೊತೆಗೆ ಬಡ ಜನರಿಗೆ ಅನ್ಯಾಯವಾದಗ ನ್ಯಾಯ ಕೊಡಿಸುವ ಸಹ ಸಂಘಟನೆಗಳು ಮಾಡುತ್ತಿದ್ದಾರೆ, ಅದರ ಜೊತೆಗೆ ಸಾಮಾಜಿಕ ಕಳಕಳಿಯಿಂದ ಬಡವರಿಗೆ ಅಕ್ಕಿ ಮತ್ತು ಸಮವಸ್ತ್ರ ನೀಡುತ್ತಿರುವುದು ಶ್ಲಾಘನೀಯ, ಟೇಕಲ್ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಮಾಸ್ತಿ, ಟೇಕಲ್ ಆಸ್ಪತ್ರೆ ಯನ್ನು ೨೪ ಗಂಟೆ ಸೌಲಭ್ಯ ಸಿಗುವ ಐದು ವೈದ್ಯರು ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಇನ್ನೂ ಐಟಿಐ ಕಾಲೇಜು ಮತ್ತು ರೈಲ್ವೆ ಬಿಡ್ಜ್ ಸಹ ಕಾಮಗಾರಿ ಪ್ರಗತಿಯಲ್ಲಿದೆ ಕೆಲವೆ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದ್ರು,
ಈ ಸಂದರ್ಭದಲ್ಲಿ ಕರ್ನಾಟಕ ಜನ ಸೇವಕರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ತಾಲ್ಲೂಕು ಅಧ್ಯಕ್ಷ ಡಿ.ಸಿ.ಚಲಪತಿ ಗೌಡ, ಮುನಿಯಪ್ಪ, ಇನ್ನೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು,