ಮಳ್ಳೂರು ಪಾಪಣ್ಣ ಸ್ಮರಣಾರ್ಥ ಸಮುದಾಯ ಭವನ
1 min read
ಮಳ್ಳೂರು ಪಾಪಣ್ಣ ಸ್ಮರಣಾರ್ಥ ಸಮುದಾಯ ಭವನ
ಭವನ ನಿರ್ಮಾಣಕ್ಕೆ ಅಗತ್ಯ ನೆರವು ಭರವಸೆ ನೀಡಿದ ನಾಯಕ
ರಾಜ್ಯದ ಸಹಕಾರ ಪ್ರಶಸ್ತಿ ಪುರಸ್ಕೃತರು ಸ್ವಾತಂತ್ರ ಹೋರಾಟಗಾರರು ಮತ್ತು ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಅಖಂಡ ವಿಧಾನಸಭೆ ಕ್ಷೇತ್ರದ ಪ್ರಪ್ರಥಮ ಶಾಸಕ ಜಿ ಪಾಪಣ್ಣ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಸಮುದಾಯದ ಭವನದ ಕಾಮಗಾರಿಗೆ ಅಗತ್ಯ ನೆರವು ನೀಡುವುದಾಗಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ `ಭವನದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ ಮಹಿಳೆಯರು ಕೂಲಿ ಕಾರ್ಮಿಕರು ಸರ್ಕಾರಿ ನೌಕರರು ಪರ ಅನೇಕ ಹೋರಾಟಗಳನ್ನು ಮಾಡಿದ ಸಹಕಾರ ಕ್ಷೇತ್ರದ ಮೂಲಕ ಕ್ರಾಂತಿಕಾರಿ ಬದಲಾವಣೆ ತರಲು ಚಿಂತನೆ ಮಾಡಿದ ಮಾಜಿ ಶಾಸಕರು ಮಳ್ಳೂರು ಜಿ.ಪಾಪಣ್ಣ ಅವರ ಸ್ಮರಣಾರ್ಥ ನಿರ್ಮಾಣ ಆಗುತ್ತಿರುವ ಸ್ಮಾರಕ ಭವನದ ಕಾಮಗಾರಿ ಗೆ ತಮ್ಮಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ಹಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಗೌಡ ಇದ್ದರು.