ಕಸ ಹಾಕದಿರಲು ರಂಗೋಲಿ ಹಾಕಿ ಜನರಲ್ಲಿ ಅರಿವು
1 min readಕಸ ಹಾಕದಿರಲು ರಂಗೋಲಿ ಹಾಕಿ ಜನರಲ್ಲಿ ಅರಿವು
ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರ ವಿನೂತನ ಪ್ರಯತ್ನ
ಅರಸೀಕೆರೆ ನಗರದಲ್ಲಿ ಹಲವು ವರ್ಷಗಳಿಂದ ರಸ್ತೆ ಪಕ್ಕದ ಕೆಲ ಪ್ರಮುಖ ಸ್ಥಳಗಳಲ್ಲಿ ಕಸ ಹಾಕದಂತೆ ಜನರಲ್ಲಿ ಎಷ್ಟೇ ಅರಿವು ಮೂಡಿಸಿದರು ಜನರು ಮಾತ್ರ ಕಸ ಹಾಕುವುದನ್ನು ಬಿಡುತ್ತಿಲ್ಲ. ಇದರಿಂದ ಕಸ ಹಾಕುವ ಜಾಗವನ್ನು ಸಂಪೂರ್ಣ ಸ್ವಚ್ಛ ಮಾಡಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಗರಸಭೆಯಿಂದ ಹಮ್ಮಿಕೊಳ್ಳಲಾಗಿತ್ತು
ಕಸ ಹಾಕುವ ಜಾಗವನ್ನು ಸಂಪೂರ್ಣ ಸ್ವಚ್ಛ ಮಾಡಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅರಸೀಕೆರೆ ನಗರಸಭೆಯಿಂದ ಮಾಡಲಾಯಿತು. ಜನರು ಕಸ ಹಾಕದಂತೆ ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ, ಕಸ ಹಾಕಿದರೆ ದಂಡ ವಿಧಿಸುವ ಎಚ್ಚರಿಕೆ ಸೇರಿದಂತೆ ಹಲವು ಪ್ರಯತ್ನಗಳನ್ನು ನಗರಸಭೆ ಅಧಿಕಾರಿಗಳು ಈ ವರೆಗೂ ಮಾಡುತ್ತಾ ಬಂದಿದ್ದರು. ಆದರೆ ಜನರು ಮಾತ್ರ ಕಸ ಹಾಕುವುದನ್ನು ಬಿಡುತ್ತಿಲ್ಲ. ಇದರಿಂದ ವಿನೂತನ ಪ್ರಯತ್ನವಾಗಿ ಕಸ ಹಾಕಿದ ಸ್ಥಳವನ್ನು ಸ್ವಚ್ಛಗೊಳಿಸಿ ಪೌರ ಕಾರ್ಮಿಕ ಮಹಿಳೆಯರು ರಂಗೋಲಿ ಹಾಕಿ, ಆ ಪ್ರದೇಶದ ಮನೆ ಮನೆಗೆ ಹೋಗಿ ಮಹಿಳೆಯರಿಗೆ ಕಸ ಹಾಕದಂತೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದಭದಲ್ಲಿ ನಗರ ಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಅರಸೀಕೆರೆ ನಗರವನ್ನು ಸ್ವಚ್ಛ ನಗರ ಮಾಡಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರು ಜನರು ಮಾತ್ರ ಕಸ
ಹಾಕುವುದನ್ನು ಬಿಡುತ್ತಿಲ್ಲ. ಅದರಿಂದ ಮುಂದಿನ ದಿನಗಳಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮವಾಗಿ ದಂಡಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ನಗರಸಭೆ ಅಧ್ಯಕ್ಷ ಎಂ. ಸಮೀವುಮಾತನಾಡಿ, ಅರಸೀಕೆರೆ ನಗರ ಮಾದರಿ ನಗರ ಸ್ವಚ್ಛ ನಗರ ಮಾಡಲು ಬೆಳಗಿನ ಜಾವ ಅಧಿಕಾರಿಗಳನ್ನು ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಲಾಗುತ್ತಿದೆ ಎಂದರು. ಜನರು ಮಾತ್ರ ರಸ್ತೆ ಬದಿ ಕಸ ಹಾಕುವುದನ್ನು ಬಿಡುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷ, ನಗರಸಭೆಯಿಂದ ಸ್ವಚ್ಛತೆಗಾಗಿ ಮನೆ ಮನೆಗೆ ಕಸ ಸಂಗ್ರಹಣೆಗಾಗಿ ಬಕಿಟ್ ನೀಡಲಾಗಿದೆ. ಪ್ರತಿದಿನ ಬೀದಿಗಳಿಗೆ
ಕಸ ಸಂಗ್ರಹಣೆಕ್ಕಾಗಿ ಆಟೋಗಳನ್ನು ಕಳುಹಿಸಿಕೊಡಲಾಗುತ್ತಿದೆ. ಆದರೆ ಜನರು ಮಾತ್ರ ಆಟೋಗಳಿಗೆ ಕಸ ಹಾಕುವುದನ್ನು ಬಿಟ್ಟು ರಾತ್ರಿ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಸುರಿದು ಪ್ರದೇಶ ಮಲಿನ
ಮಾಡುತ್ತಿರುವುದು ಭೇಸರ ತಂದಿದೆ ಎಂದರು. ಮು0ದಿನ ದಿನಗಳಲ್ಲಿ ಈ ರೀತಿ ರಸ್ತೆಗಳಲ್ಲಿ ಕಸ ಹಾಕದೆ ಸ್ವಚ್ಛತೆಗಾಗಿ ನಗರಸಭೆಯೊಂದಿಗೆ ಸಹರಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ನಗರ ಸಭೆ ಪರಿಸರ ಅಧಿಕಾರಿ ರವಿಕುಮಾರ್, ಆರೋಗ್ಯ ಅಧಿಕಾರಿ ರೇವಣ್ಣ ಸಿದ್ದಪ್ಪ, ನಗರಸಭೆ ಅಧಿಕಾರಿಗಳು, ಪೌರ
ಕಾರ್ಮಿಕರು ಉಪಸ್ಥಿತರಿದ್ದರು.