ಅರ್ಕಾವತಿ ನದಿ ಹೋರಾಟಕ್ಕೆ ಮಹಿಳಾ ಶಕ್ತಿ ಸಾಥ್
1 min readಅರ್ಕಾವತಿ ನದಿ ಹೋರಾಟಕ್ಕೆ ಮಹಿಳಾ ಶಕ್ತಿ ಸಾಥ್
ಎಸ್‌ಟಿಪಿ ಘಟಕ ಸ್ಥಾಪನೆಗೆ ಸಂತ್ರಸ್ಥರ ಆಗ್ರಹ
ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ
ಅರ್ಕಾವತಿ ನದಿ ಹೋರಾಟ ಸಮಿತಿ ಶುದ್ಧ ನೀರಿಗಾಗಿ ನಿರಂತರ ಹೋರಾಟ ನೆಡೆಸುತ್ತಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಗ್ರಾಮದ ಮಹಿಳಾ ಶಕ್ತಿ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಪ್ರತಿಭಟನೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಚೈತ್ರ ಭಾಸ್ಕರ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯೆ ಚೈತ್ರಾ, ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮಸ್ಥರು ನಿರಂತರ ಹೋರಾಟ ಮಾಡುತ್ತಿದ್ದರು ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ ಮಹಿಳಾ ಶಕ್ತಿ ಹೋರಾಟ ನೆಡೆಸಲು ಮುಂದಾಗಲಿದೆ. ತಾಲ್ಲೂಕಿನ ಭಾಷೆಟ್ಟಿಹಳ್ಳಿಯಲ್ಲಿ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯನೀರು ಜಲ ಮೂಲ ಸೇರುವ ಮೂಲಕ ಜಲಸಂಪನ್ಮೂಲಗಳು ಸಂಪೂರ್ಣಹಾಳಾಗಿವೆ. ಕೂಡಲೇ ಎಸ್ ಟಿ ಪಿ ಘಟಕ ಸ್ಥಾಪಿಸಲೇ ಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ನೆಡೆಸಲಾಗುವುದು ಎಂದರು.
ಸ್ಥಳೀಯರಾದ ಸುಮಿತ್ರಾ ಮಾತನಾಡಿ, ಮನೆಯಲ್ಲಿ ಬಳಸುವ ನೀರು ಸಂಪೂರ್ಣ ರಾಸಾಯನಿಕ ಅಂಶಗಳಿ0ದ ಕೂಡಿದ್ದು, ಗ್ರಾಮಸ್ಥರು ಹಲವು ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಕುರಿತು ಅಧಿಕಾರಿಗಳ ಮೌನ ಸಲ್ಲದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಳೀಯವಾಗಿ ಕಲ್ಪಿಸಬೇಕು ಹಾಗೂ ಎಸ್ ಟಿ ಪಿ ಘಟಕ ಸ್ಥಾಪಿಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ. ದನ ಕರುಗಳೊಂದಿಗೆ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಲಾಗುವುದು ಎಂದರು.