ಜನರಿಗೆ ದುಬಾರಿಯಾದ ವರ ಮಹಾಲಕ್ಷ್ಮಿ ಹಬ್ಬ
1 min readಬೆಲೆಯೇರಿಕೆ ನಡುವೆಯೂ ಖರೀದಿ ಜೋರು
ಜನರಿಗೆ ದುಬಾರಿಯಾದ ವರ ಮಹಾಲಕ್ಷ್ಮಿ ಹಬ್ಬ
ಎಲ್ಲವೂ ಬೆಲೆಯೇರಿಕೆ, ಹೂವು ಕೇಳಲೂ ಹೆದರುವ ಸ್ಥಿತಿ
ಲಕ್ಷ್ಮಿ ಎಂದರೆ ಸಂಪತ್ತಿನ ಅಧಿದೇವತೆ. ವರಮಹಾಲಕ್ಷ್ಮಿ ಹಬ್ಬದ ಸಡಗರ ಈ ಬಾರಿ ಜೋರಾಗಿಯೇ ಇದೆ. ನಾಳಿನ ಹಬ್ಬಕ್ಕೆ ಎಲ್ಲರೂ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಹೆಂಗಳೆಯರು ಈ ಒಂದು ವ್ರತಕ್ಕಾಗಿ ಪ್ರತಿ ಬಾರಿ ಕಾಯುತ್ತಾರೆ. ಲಕ್ಷ್ಮಿ ಅಲಂಕಾರ, ಪೂಜೆ, ಪುನಸ್ಕಾರ, ಮುತೈದೆಯರನ್ನು ಕರೆದು ಅರಿಶಿನ, ಕುಂಕುಮ ಪ್ರಸಾದ ನೀಡುವುದು ಎಲ್ಲವನ್ನೂ ಖುಷಿಯಿಂದ ಮಾಡುತ್ತಾರೆ. ಆದರೆ ಪ್ರಸ್ತುತ ಬೆಲೆಯೇರಿಕೆ ತೀವ್ರತೆಯಲ್ಲೂ ಹಬ್ಬದ ಸಂಭ್ರಮ ಕುಂದದಿರುವುದು ವಿಶೇಷ.
ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಹಾಗಾದರೆ ಈ ವರಮಹಾ ಲಕ್ಷ್ಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ, ಇದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯುವುದಾದರೆ, ಹಿಂದೂ ಪುರಾಣಗಳಲ್ಲಿ ಲಕ್ಷ್ಮಿಯನ್ನು ಸಂಪತ್ತು, ಸಮೃದ್ಧಿ, ಶಕ್ತಿ ಮತ್ತು ಅದೃಷ್ಟದ ದೇವತೆ ಎನ್ನಲಾಗುತ್ತದೆ. ಹಣ ಮಾತ್ರವಲ್ಲದೆ, ಮುತೈದೆಯರನ್ನು ಈ ದಿನ ತಮ್ಮ ಪತಿ ಹಾಗೂ ಕುಟುಂಬದವರ ನೆಮ್ಮದಿ, ಸಂಪತ್ತು, ಕೀರ್ತಿ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತತಿ, ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತ ಯುವತಿಯರು ಈ ವ್ರತವನ್ನು ಆಚರಿಸುವುದರಿಂದ ಅವರಿಗೆ ಶುಭ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ.
ಕೆಲ ಮನೆಗಳಲ್ಲಿ ವರಮಹಾಲಕ್ಷ್ಮಿ ವ್ರತದಂದು ಮನೆಗೆ ಅರಿಶಿನ ಕುಂಕುಮಕ್ಕಾಗಿ ಬರುವವರಿಗೆ ವರಮಹಾಲಕ್ಷ್ಮಿ ವ್ರತದ ಕಥೆ ಪುಸ್ತಕಗಳನ್ನು ನೀಡುವ ವಾಡಿಕೆ ಇದೆ. ಈ ಪುಸ್ತಕದಲ್ಲಿ ಇರುವಂತೆ ಪೂಜೆ, ಪುನಸ್ಕಾರ ಮಾಡಿದರೆ ಖಂಡಿತ ವರಮಹಾಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಇನ್ನು ನಾವು ಮಾಡುವ ಪತ್ರಿ ಹಬ್ಬದ ಹಿಂದೆ ಒಂದು ಕಥೆ ಹಾಗೂ ಹಿನ್ನೆಲೆ ಇರುತ್ತದೆ. ಹಾಗೇ ವರಮಹಾಲಕ್ಷ್ಮಿ ಹಬ್ಬದ ಹಿಂದೆಯೂ ಒಂದು ಹಿನ್ನೆಲೆ ಇದೆ.
ಸಾಕ್ಷಾತ್ ಶಿವ, ಪಾರ್ವತಿಗೆ ಹೇಳಿದ್ದು ಎಂಬ ನಂಬಿಕೆ ಇದೆ. ಮಗದ ರಾಜ್ಯದ ಚಾರುಮತಿ ಎಂಬ ದೈವಕ್ತೆ ನಿಸ್ವಾರ್ಥದಿಂದ ತನ್ನ ಪತಿ ಹಾಗೂ ಮನೆಯವರ ಸೇವೆ ಮಾಡುತ್ತಿರುತ್ತಾಳೆ. ಈಕೆಯ ಒಳ್ಳೆಯ ಮನಸ್ಸು ಹಾಗೂ ಭಕ್ತಿಯನ್ನು ಮೆಚ್ಚಿ ಒಮ್ಮೆ ಲಕ್ಷ್ಮಿಕನಸ್ಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆ ನಂತರದ ಶುಕ್ರವಾರ ತನ್ನನ್ನು ಪೂಜಿಸಿದರೆ ಆಕೆ ಬೇಡುವ ಎಲ್ಲಾ ವರ ನೀಡುತ್ತೇನೆ ಎಂದು ವಾಗ್ದಾನ ನೀಡುತ್ತಾಳೆ. ಸಾಕ್ಷಾತ್ ಲಕ್ಷ್ಮಿದೇವಿಯೇ ತನ್ನ ಕನಸಿನಲ್ಲಿ ಬಂದು ಹೀಗೆ ಹೇಳಿದ ಪರಿಣಾಮ ಸಂತೋಷಗೊ0ಡ ಚಾರುಮತಿ, ತನ್ನ ಮನೆಯವರಿಗೆ ವಿಚಾರ ತಿಳಿಸಿ, ನೆರೆಹೊರೆಯ ಮುತೈದೆಯರನ್ನು ಕರೆದು ಲಕ್ಷ್ಮಿಪೂಜೆ ಮಾಡುತ್ತಾಳೆ.
ಪೂಜೆ ಸಮಾಪ್ತಿಯಾಗುತ್ತಿದ್ದಂತೆ ಅಲ್ಲಿ ನೆರೆದಿದ್ದವರಿಗೆ ಲಕ್ಷ್ಮಿಸಂಪತ್ತನ್ನು ಕರುಣಿಸುತ್ತಾಳೆ. ಹಾಗೇ ಅವರೆಲ್ಲಾ ತಮ್ಮ ಜೀವನದುದ್ದಕ್ಕೂ ಸುಖ ಸಂತೋಷದಿ0ದ ನೆಲೆಸುತ್ತಾರೆ. ಆದ್ದರಿಂದಲೇ ಪ್ರತಿ ವರ್ಷ ಶ್ರಾವಣ ಮಾಸದಂದು ಎಲ್ಲಾ ಹೆಣ್ಣು ಮಕ್ಕಳು ಲಕ್ಷ್ಮಿಯನ್ನು ಪೂಜಿಸಿ ಸಕಲ ಸಂಪತ್ತನ್ನು ಪಡೆಯುವ ಮೂಲಕ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ರಾಕ್ಷ್ಷಸರು ಹಾಗೂ ದೇವತೆಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಕ್ಷೀರಸಾಗರದಲ್ಲಿ ಶ್ವೇತ ವರ್ಣದ ಮಹಾಲಕ್ಷ್ಮಿ ಉದ್ಭವಿಸುತ್ತಾಳೆ ಆದ್ದರಿಂದ ವರಮಹಾಲಕ್ಷ್ಮಿಹಬ್ಬದಂದು ಬಹಳ ಕಡೆ ಆ ದೇವಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ.
ಇನ್ನು ನಾಳೆ ವರ ಮಹಾಲಕ್ಷ್ಮಿ ಹಬ್ಬ ಇರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲ್ಲೆೆಯಾದ್ಯಂತ ಜನರು ಹಬ್ಬದ ಸಾಮಾಗ್ರಿಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡರೂ ಗ್ರಾಹಕರ ಖರೀದಿಗೆ ಕೊರತೆ ಇಲ್ಲ ಎಂಬ ಸ್ಥಿತಿ ಇತ್ತು. ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೆರಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದೆ.
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಗರದ ಹಲವೆಡೆ ಬೀದಿ ಬದಿಗಳಲ್ಲಿ ಬುಧವಾರದಿಂದಲೇ ವ್ಯಾಪಾರದ ಭರಾಟೆ ಆರಂಭ0ವಾದರೂ ಗುರುವಾರ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಎಂ.ಜಿ ರಸ್ತೆ, ಗಂಗಮ್ಮನಗುಡಿ ರಸ್ತೆಗಳ ಇಕ್ಕೆಲೆಗಳಲ್ಲಿ ಜನರು ಹಬ್ಬಕ್ಕೆ ಸಾಮಾಗ್ರಿಗಳನ್ನು ಖರೀದಿಸಲು ಮುಗಿಬಿದ್ದರು. ಮಾರುಕಟ್ಟೆಯಲ್ಲಿರುವ ವರಮಹಾಲಕ್ಷ್ಮಿ ಪೂಜೆಗೆ ಅವಶ್ಯವಿರುವ ಮಹಾಲಕ್ಷ್ಮಿ ಆಕರ್ಷಕ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದವು. ಮೂರ್ತಿಗಳು 180 ರಿಂದ 2 ಸಾವಿರ ರೂ.ವರೆಗೂ ಮಾರಾಟವಾಗುತ್ತಿದ್ದವು. ಮೂರ್ತಿಯ ಆಯ್ಕೆಯಲ್ಲಿ ಮಹಿಳೆಯರು ಖರೀದಿಸುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು.
ನಗರದ ಮಾರುಕಟ್ಟೆಯಲ್ಲಿ 1 ಕೆ.ಜಿಗೆ ಚೆಂಡು ಹೂ200 ರೂ., 1 ಕೆ.ಜಿ ಗುಲಾಬಿ 200 ರೂ., ಗುಲಾಬಿ ಹಾರ 500ರೂ, 1 ಕೆ.ಜಿ ಸೇವಂತಿ 400, 1 ಕೆ.ಜಿ ಕಾಕಡ 3 ಸಾವಿರ, 1 ಕೆ.ಜಿ ಮಲ್ಲಿಗೆ 4 ಸಾವಿರ, 1 ಕೆ.ಜಿ ಕನಕಾಂಬರ 4000, ಬಟನ್ಸ್ ಹೂ ಒಂದು ಕಟ್ಟು 200, ಲೋಟಸ್ ಒಂದು ಕಟ್ಟು 200, 1 ತಾವರೆ 50 ರೂ.ಗಳಿಗೆ ಮಾರಾಟವಾಗುತ್ತಿತ್ತು.
1 ಕೆ.ಜಿ ಏಲಕ್ಕಿ ಬಾಳೆ ಹಣ್ಣು 150೦, 1 ಕೆ.ಜಿ ಪಚ್ಚೆ ಬಾಳೆಹಣ್ಣು 150, 1 ಕೆ.ಜಿ ದ್ರಾಕ್ಷಿ 200, 1 ಕೆ.ಜಿ ಶಿಮ್ಲಾ ಸೇಬು 200, 1 ಕೆ.ಜಿ ಕಲ್ಲಂಗಡಿ 100, 1 ಕೆ.ಜಿ ದಾಳಿಂಬೆ 200, 1 ಕೆ.ಜಿ ನಾಟಿ ಮೋಸಂಬಿ 100, 1 ಕೆ.ಜಿ ಹೈಬ್ರಿಡ್ ಮೋಸಂಬಿ 120, 1 ಕೆ.ಜಿ ಕಿತ್ತಳೆ ಸ್ಥಳೀಯ 200, 1 ಕೆ.ಜಿ ಕಿತ್ತಳೆ ವಿದೇಶಿ 250, 1 ಅನಾನಸ್ 100 ರೂ., ಮಿಕ್ಸ್ ಹಣ್ಣು 500 ರೂ, ವರೆಗೆ ಮಾರಾಟವಾಗುತ್ತಿತ್ತು.