ಎಲ್ ಪಿ ಜಿ ಸಿಲಿಂಡರ್ ಬ್ಲಾಸ್ಟ್: ಮೂವರಿಗೆ ಗಾಯ
1 min readಎಲ್ ಪಿಜಿ ಗೃಹಬಳಕೆ ಸಿಲಿಂಡರ್ ನಿಂದ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಪೋಟ ಸಂಭವಿಸಿ ಇಡೀ ಮನೆ ಛಿದ್ರ ಛಿದ್ರವಾಗಿ ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ೫ನೇ ವಾರ್ಡಿನ ನಗರ ಪೊಲೀಸ್ ಠಾಣೆ ಹಿಂಬದಿಯಲ್ಲಿ ನಡೆದಿದೆ.
೫ನೇ ವಾರ್ಡಿನ ಫರ್ಜಾನಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು., ಮನೆ ಮಾಲೀಕರಾದ ಫರ್ಜಾನಾ ಕೆಲಸಕ್ಕೆ ತೆರಳಿದ್ದು, ೪ ವರ್ಷ ದ ಮಗ ರಫೀಕ್ ಹಾಗೂ ೧೬ ವರ್ಷದ ಹರ್ಷಿಯಾ ಭಾನು ಮನೆಯಲ್ಲಿದ್ರು. ಈ ವೇಳೆ ಮನೆಯಿಂದ ಗ್ಯಾಸ್ ವಾಸನೆ ಬರ್ತಿದೆ ಅಂತ ಪಕ್ಕದ ಮನೆ ನಿವಾಸಿ ೧೮ ವರ್ಷದ ಹೇಮಾವತಿ ಬಂದು ಹರ್ಷಿಯಾ ಭಾನುಗೆ ತಿಳಿಸಿದ್ದು, ಈ ವೇಳೆ ಏಕಾಏಕಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂವರಿಗೆ ಸರಿಸುಮಾರು ಶೇ ೩೫ ರಿಂದ ೪೦ ರಷ್ಟು ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದಿಂದ ಮನೆಯಲ್ಲಿನ ಪಾತ್ರೆ ಸಾಮಾನುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಮನೆಯ ಮೇಲ್ಛಾವಣಿಯ ತಗಡಿನ ಶೀಟ್ ಗಳು ಹಾರಿ ಹೋಗಿವೆ. ಹಿಂಬದಿಯ ಮನೆಯ ಮುಂಭಾಗದ ಎರಡು ಬೈಕ್ ಗಳು ಹಾನಿಗೊಳಗಾಗಿವೆ. ಈ ಸಂಬAಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪಿಎಸ್‌ಐ ನಂಜುAಡಯ್ಯ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.