ಸಿಡಿಲು ಬಡಿದು ದುರಂತ: ನಾಲ್ವರು ಕುರಿಗಾಹಿಗಳಿಗೆ ಸೇರಿದ 30 ಕುರಿಗಳು ಸಾವು
1 min readವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಡಿಗುಡಾಳ ಗ್ರಾಮದ ಬಳಿ ಸಿಡಿಲು ಬಡಿದು ಮೂವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಮಳೆ ಹಿನ್ನೆಲೆ ಆಶ್ರಯ ಪಡೆಯಲು ಮರದ ಕೆಳಗೆ ಕುರಿಗಳು ನಿಂತಿದ್ದವು. ನಾಲ್ವರು ಕುರಿಗಾಹಿಗಳಿಗೆ ಸೇರಿದ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿಗಳು ಒತ್ತಾಯಿಸಿದ್ದಾರೆ. ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.