ಒಪಿಎಸ್ ಯೋಜನೆ ಶೀಘ್ರ ಅನುಷ್ಠಾನವಾಗಲಿ
1 min readಒಪಿಎಸ್ ಯೋಜನೆ ಶೀಘ್ರ ಅನುಷ್ಠಾನವಾಗಲಿ
ಗುಬ್ಬಿ ಪಟ್ಟಣದಲ್ಲಿ ಶಿಕ್ಷಕರ ಸಂಘದಿ0ದ ಸುದ್ದಿಗೋಷ್ಠಿ
ಎನ್‌ಪಿಎಸ್ ಯೋಜನೆ ರದ್ದು ಹಾಗೂ ಒಪಿಎಸ್ ಯೋಜನೆ ಶೀಘ್ರ ಜಾರಿ ಕುರಿತು ಒತ್ತಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ದಯಾನಂದ ಸರಸ್ವತಿ ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ದಯಾನಂದ ಸರಸ್ವತಿ, ತಾಲೂಕಿನ ಶಿಕ್ಷಕರುಗಳಿಗೆ ಉತ್ತಮ ಸೇವೆ ಒದಗಿಸಲು ತಂಡ ಯೋಜನೆ ರೂಪಿಸುತ್ತಿದ್ದು, ಶಿಕ್ಷಕರಿಗೆ ಆದಾಯ ತೆರಿಗೆ ಲೆಕ್ಕಾಚಾರ ಹಾಗೂ ಐಟಿ ರಿಟರ್ನ್ ಸಲ್ಲಿಸುವ ಬಗ್ಗೆ ತರಬೇತಿ ಮುಂದಿನ ದಿನದಲ್ಲಿ ನೀಡಲಾಗುತ್ತಿದೆ ಎಂದರು.
ಶಿಕ್ಷಕರ ಆರೋಗ್ಯ ಸೇವೆ ನೀಡಬೇಕು ಎಂದು ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆ ತುರ್ತಾಗಿ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ತಯಾರಿ ನಡೆಸಿದ್ದೇವೆ ಎಂದರು.
ಶಶಿಧರ್ ಮಾತನಾಡಿ, ಶಿಕ್ಷಕರ ಮಕ್ಕಳಿಗೆ ಸ್ಪೂರ್ತಿ ತುಂಬಲು ಪ್ರತಿಭಾ ಪುರಸ್ಕಾರ ದಂತಹ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ತಯಾರಿ ನಡೆಸಿರುವುದಾಗಿ ತಿಳಿಸಿದರು. ಶಿವಕುಮಾರ್, ಶ್ರೀನಿವಾಸ ಮೂರ್ತಿ, ಎನ್ ಟಿ ಲಕ್ಷಮ್ಮ, ಮೋಹನ್ ಕುಮಾರ್, ಸುಬ್ರಮಣ್ಯ, ಅರುಣ್ ಕುಮಾರ್, ಕಾಂತರಾಜು ರಾಜಣ್ಣ ಇದ್ದರು.