ಸದನದಲ್ಲಿ ಹೇಮಾವತಿ ಎಕ್ಸ್ಪ್ರೆಸ್‌ಕೆನಾಲ್ ವಿಚಾರ ಚರ್ಚೆಯಾಗಲಿ
1 min read
ಸದನದಲ್ಲಿ ಹೇಮಾವತಿ ಎಕ್ಸ್ಪ್ರೆಸ್‌ಕೆನಾಲ್ ವಿಚಾರ ಚರ್ಚೆಯಾಗಲಿ
ಶಾಸಕರು, ಸಚಿವರಿಂದ ರಾಮನಗರಕ್ಕೆ ನೀರು ನೀಡುವುದಕ್ಕೆ ವಿರೋಧ ಮಾಡಲಿ
ಹೇಮಾವತಿ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ನೀರು ಹರಿಸುವುದನ್ನು ವಿರೋಧಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ತೀವ್ರವಾಗಿ ಖಂಡಿಸಬೇಕು ಎಂದು ಬಿಜೆಪಿ ಮುಖಂಡ ಎಸ್‌ಡಿ ದಿಲೀಪ್ ಕುಮಾರ್ ಒತ್ತಾಯಿಸಿದರು.
ಹೇಮಾವತಿ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ನೀರು ಹರಿಸುವುದನ್ನು ವಿರೋಧಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ತೀವ್ರವಾಗಿ ಖಂಡಿಸಬೇಕು ಎಂದು ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಒತ್ತಾಯಿಸಿದರು. ಗುಬ್ಬಿ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕೆನಾಲ್ ಮೂಲಕ ನೀರು ರಾಮನಗರಕ್ಕೆ ಹರಿದರೆ ಇಡೀ ತುಮಕೂರು ಜಿಲ್ಲೆಗೆ ಸಂಕಷ್ಟ ಎದುರಾಗುತ್ತದೆ. ಕಲ್ಪತರು ನಾಡಿಗೆ ಹೇಮಾವತಿಯೇ ಜೀವಾಳವಾಗಿದ್ದು, ಯಾವುದೇ ಕಾರಣಕ್ಕೂ ರಾಮನಗರ ಜಿಲ್ಲೆಗೆ ಹರಿಸದಂತೆ ಈಗಾಗಲೇ ಹಲವು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈಗ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿಯೇ ಇದನ್ನು ತಿರಸ್ಕರಿಸುವ ಕೆಲಸವನ್ನು ಎಲ್ಲ ಜನಪ್ರತಿನಿಧಿಗಳು ಮಾಡಬೇಕು ಎಂದರು.
ಹೇಮಾವತಿ ನಾಲೆಯ ಮೂಲಕ ಜಿಲ್ಲೆಯ ಕೆರೆಗಳಿಗೆ ಈಗಿನಿಂದಲೇ ನೀರು ಹರಿಸುವ ಕೆಲಸಕ್ಕೆ ಮುಂದಾದಲ್ಲಿ ಅಣೆಕಟ್ಟೆಯಲ್ಲಿ ಒಳಹರಿವು ಹೆಚ್ಚು ಇರುವುದರಿಂದ ಜಿಲ್ಲೆಯ ಕೆರೆಗಳು ತುಂಬಲು ಅನುಕೂಲವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಮನಸ್ಸು ಮಾಡಿ, ಜಿಲ್ಲೆಗೆ ನೀರು ಹರಿಸಬೇಕು ಎಂದರು. ಕೆಎಸ್‌ಆರ್‌ಟಿಸಿ ಟಿಕೆಟ್ ದರ ಹೆಚ್ಚಿಸಬೇಕು ಎಂದು ಸರಕಾರ ಚಿಂತನೆ ಮಾಡಿದ್ದು, ಕೂಡಲೇ ಅದನ್ನು ಕೈ ಬಿಡಬೇಕು ಎಂದು ಒತ್ತಾಯ ಮಾಡಿದರು. ಎಪಿಎಂಸಿ ಸದಸ್ಯ ಲಕ್ಷಿ ರಂಗಯ್ಯ, ಶ್ರೀಧರ್, ಪರಮಣ್ಣ, ಜಗದೀಶ್ ಇದ್ದರು.