ಅಸಂಘಟಿತ ಪುರೋಹಿತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ
1 min readಅಸಂಘಟಿತ ಪುರೋಹಿತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ
ಗುರ್ತಿನ ಚೀಟಿ ವಿತರಿಸಿ, ಅಸಂಘಟಿತ ವಲಯಕ್ಕೆ ಸೇರಿಸಿ
ಅಖಿಲ ಭಾರತ ಅಸಂಘಟಿತ ವೃತ್ತಿಪರ ಪುರೋಹಿತ ಕಾರ್ಮಿಕರ ಫೆಡರೇಷನ್‌ನಿಂದ ಪುರೋಹಿತ ವರ್ಗಕ್ಕೆ ಸರಕಾರಿ ಅಧಿಕೃತ ಗುರುತಿನ ಚೀಟಿ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ, ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡುವುದು ಸೇರಿದಂತೆ ಇತರೆ ವಿಚಾರಗಳ ಕುರಿತು ಬಾಗೇಪಲ್ಲಿ ತಾಲೂಕಿನ ಗಡಿದಂ ನಲ್ಲಿ ಸಭೆ ನಡೆಸಲಾಯಿತು.
ಬಾಗೇಪಲ್ಲಿ ತಾಲೂಕಿನ ಗಡಿದಿಂನಲ್ಲಿ ಇಂದು ನಡೆದ ಪುರೋಹಿತರ ಸಭೆಯಲ್ಲಿ ಅಖಿಲ ಭಾರತ ಅಸಂಘಟಿತ ವೃತ್ತಿಪರ ಪುರೋಹಿತ ಕಾರ್ಮಿಕರ ಫೆಡರೇಷನ್ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ಮೂರ್ತಿ ಮಾತನಾಡಿ, ಹಿಂದೂ ಸಂಸ್ಕೃತಿ ದೇವಾಲಯಗಳ ಸೊಬಗು, ಆರಾಧನೆ, ಪೂಜೆ, ಉಪನಯನ, ಹೋಮ, ಯಜ್ಞ ,ಯಾಗ ಹೀಗೆ ಲೋಕಕಲ್ಯಾಣಕ್ಕಾಗಿ ಮಾಡುವ ವೃತ್ತಿಪರ ಅರ್ಚಕ ಮತ್ತು ಪುರೋಹಿತರ ಜೀವನ ನಡೆಸುತ್ತಿದ್ದಾರೆ ಎಂದರು.
ಪ್ರಸ್ತುತ ಪುರೋಹಿತರ ಜೀವನ ಸಾಕಷ್ಟು ಅಸಹಾಯಕ ಮತ್ತು ಸಂಕಷ್ಟ ಸ್ಥಿತಿಯಲ್ಲಿದೆ. ಎಷ್ಟೋ ರಾಜಕೀಯ ಪಕ್ಷಗಳು ಯುಗಗಳು ಕಳೆದರೂ, ಪುರೋಹಿತ ವೃತ್ತಿಪರ ಕೆಲಸ ಮಾಡುವ ವರ್ಗಕ್ಕೆ ಯಾವುದೇ ಅನುದಾನ ದೊರಕದಿರುವುದು ವಿಷಾಧನೀಯ. ಸರಕಾರ ಕೂಡಲೇ ವೃತ್ತಿಪರ ಅಸಂಘಟಿತ ವಲಯದ ಪುರೋಹಿತರ ನೆರವಿಗೆ ಭಾವಿಸಿ, ಸರಕಾರದ ಗುರುತಿನ ಚೀಟಿ ಮತ್ತು ಆರ್ಥಿಕ ಸೌಲಭ್ಯಗಳನ್ನ ಒದಗಿಸಬೇಕು ಎಂದು ಆಗ್ರಹಿಸಿದರು.
ಕೌಶಲ್ಯ ಅಭಿವೃದ್ಧಿ ವೇದಾಭ್ಯಯನಕ್ಕೆ ಗುರುಕುಲಗಳು ವಿಮಾ ಮತ್ತು ಗೃಹ ನಿರ್ಮಾಣ ಸಾಲ ಹೀಗೆ ಹಲವು ಸರಕಾರಿ ಸೌಲಭ್ಯಗಳನ್ನು ಮಾಡಿಕೂಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು. ಈ ವೇಳೆ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವಾಧ್ಯಕ್ಷ ಡಾ. ರಾಮೋಹನ್ ಶಾಸ್ತಿç, ಅಧ್ಯಕ್ಷ ಸಂದೀಪ್ ಶರ್ಮ, ಉಪಾಧ್ಯಕ್ಷರಾದ ಅರುಣ್ ಕುಮಾರ್, ಆಶಾ ಕುಮಾರ್, ಖಜಾಂಚಿ ಸುರೇಶ್, ಪ್ರಧಾನ ಕಾರ್ಯದರ್ಶಿ ಹೆಚ್. ಪಿ. ವೆಂಕಟೇಶ್ ಶಾಸ್ತಿç ಇದ್ದರು.