ನಿರ್ಲಕ್ಷ ಮನೋಭಾವ ಬಿಟ್ಟು ಸರ್ಕಾರಿ ಯೋಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳಿ-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ
1 min readಬಾಗೇಪಲ್ಲಿ: ಸರ್ಕಾರ ರೈತರಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಕ್ರಮವಾಗಿ ಹಂಚಿಕೆ ಮಾಡಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕಸಬಾ ಮತ್ತು ಗೂಳೂರು ಹೋಬಳಿಯ 110.ಮಂದಿ ರೈತರಿಗೆ ಪೈಪುಗಳನ್ನು ವಿತರಣೆ ಮಾಡಿ ಮಾತನಾಡಿ ಅವರು ಸಾಕಷ್ಟು ಗ್ರಾಮೀಣ ಭಾಗದ ರೈತರಿಗೆ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಯೋಜನೆಗಳು ಗೊತ್ತಿರುವುದಿಲ್ಲ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದ ಅವರು ರೈತರು ಸಹ ಕೃಷಿ ಇಲಾಖೆ ಭೇಟಿ ನೀಡಿ ಸರ್ಕಾರ ಕೊಡುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
ಅಟಲ್ ಭೂಜಲ್ ಯೋಜನೆಯಡಿ ರೈತರಿಗೆ ಶೇ.90.ರಿಯಾಯಿತಿ ದರದಲ್ಲಿ 17. ಬೆಲೆಯ ಪೈಪುಗಳಿಗೆ ಸರ್ಕಾರ 19420 ಸಾವಿರ ರೂಪಾಯಿ ಕೊಡುತ್ತದೆ ರೈತರು 4139.ರೂಪಾಯಿ ಕಟ್ಟಬೇಕಾಗುತ್ತದೆ ತುಂತುರು ನೀರಾವರಿ ಕೃಷಿ ಚಟುವಟಿಕೆಗಾಗಿ 2.5.ಏಕರೆ ಜಮೀನು ಇರುವ ಎಲ್ಲಾ ರೈತರಿಗೂ ಅರ್ಹರಾಗಿರುತ್ತಾರೆ.ಸರ್ಕಾರ ನೀಡುವ ಯೋಜನೆ ಮತ್ತು ಸೌಲಭ್ಯಗಳು ಪಲಾನುಭವಿಗಳು ಸರ್ಕಾರ ಕೊಟ್ಟಿದೆ ಎಂಬ ನಿರ್ಲಕ್ಷ ಮಾಡದೆ ಕೃಷಿ ಚಟುವಟಿಕೆಗಾಗಿ ಉಪಯೋಗಿಸುವ ಮೂಲಕ ಸರ್ಕಾರಿ ಯೋಜನೆಗಳು ಸದ್ಭಳಿಕೆ ಮಾಡಿಕೊಳ್ಳುವಂತೆ ತಿಳಿಸಿದರು…
ಈ ಸಂಧರ್ಭದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳ,ಸಹಾಯಕ ನಿರ್ದೇಶಕಆರ್.ಗಂಗಾಧರ್ ರೆಡ್ಡಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬುರಗಮಡಗು ನರಸಿಂಹಪ್ಪ, ಮುಖಂಡರಾದ ಗುಂಟಿಗಾಪಲ್ಲಿ ಮಂಜುನಾಥ್ ರೆಡ್ಡಿ,
ತಾಂತ್ರಿಕ ಅಧಿಕಾರಿ ಶಂಕರಯ್ಯ ಹರೀಶ್ ಸೇರಿದಂತೆ ಇತರರು ಇದ್ದರು…