ಮಕ್ಕಳ ಹಕ್ಕುಗಳನ್ನು ಕಸಿಯದೆ ಬೆಳೆಯಲು ಬಿಡಿ
1 min readಮಕ್ಕಳ ಹಕ್ಕುಗಳನ್ನು ಕಸಿಯದೆ ಬೆಳೆಯಲು ಬಿಡಿ
ಮಕ್ಕಳ ದಿನಾಚರಣೆಯಲ್ಲಿ ವೃತ್ತ ನಿರೀಕ್ಷಕ ಮಂಜುನಾಥ್ ಸಲಹೆ
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಮಕ್ಕಳ ದಿನಾಚರಣೆ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಅವರ ಹಕ್ಕುಗಳನ್ನು ಕಸಿಯದೆ ಬೆಳೆಯಲು ಬಿಡಬೇಕು, ಆ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಮಂಜುನಾಥ್ ಹೇಳಿದರು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂದು ತಾಲೂಕಿನ ಪುಟ್ಟತಿಮ್ಮನಹಳ್ಳಿ, ಸಬ್ಬೇನಹಳ್ಳಿ, ಮಂಚನಬಲೆ, ಕಾಮಶೆಟ್ಟಿಹಳ್ಳಿ ಶಾಲೆಯ ಮಕ್ಕಳೊಂದಿಗೆ ಆಯೋಜಿಸಿದ್ದ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ವೃತ್ತ ನಿರೀಕ್ಷಕ ಮಂಜುನಾಥ್, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಕ್ಕಳ ಹಕ್ಕುಗಳ ಪಾಲನೆ ಪೋಷಣೆ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿಸಲು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಸುಂದರ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪೊಲೀಸರು ಶಾಲಾ ಮಕ್ಕಳಿಗೆ ಗುಲಾಬಿ ಹೂವು, ಚಾಕೋಲೇಟ್ ನೀಡಿ ಠಾಣೆಗೆ ಕರೆಸಿಕೊಂಡರು. ಪುಟ್ಟತಿಮ್ಮನಹಳ್ಳಿ ಶಾಲೆಯ ರೋಜಾ ಎಂಬ ವಿದ್ಯಾರ್ಥಿನಿ ಮಾತನಾಡಿ, ಪೊಲೀಸ್ ಠಾಣೆ ಎಂಬುದು ಅಪರಾಧಿಗಳನ್ನು ಶಿಕ್ಷಿಸಿ ಒಳ್ಳೆಯವರನ್ನು ರಕ್ಷಿಸುವ ತಾಣವಾಗಿದೆ. ಇಲ್ಲಿಗೆ ನಾಗರೀಕರು ಬರಲು ಹೆದರುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳನ್ನು ದೂರುಗಳು ಹೊತ್ತು ಆರಾಮಾಗಿ ಬರಬಹುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್, ಪಿಎಸ್‌ಐ ಶರಣಪ್ಪ, ಕ್ರೆ0 ಇನ್ಸ್ಪೆಕ್ಟರ್ ಗುಣವತಿ, ಸಿಆಪಿರ್ ಮಂಗಳಪ್ಪ , ಶಿಕ್ಷಕ ಗೋವಿಂದರಾಜ್ ಯಾದವ್, ಕಿರಣ್, ರಾಜೇಶ್, ಸೋಪಿಯಾ ಇದ್ದರು.