ತಿರುಪತಿ ಬಳಿ ಚಿರತೆ, ಕರಡಿ ಚಲನವಲನ ಪತ್ತೆ; ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಟಿಟಿಡಿ ಹೈ ಅಲರ್ಟ್
1 min read
1 year ago
ಅಕ್ಟೋಬರ್ 11ರಂದು 6 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಗೆ ಬಲಿಯಾದ ಬಳಿಕ ತಿರುಪತಿ ದೇವಸ್ಥಾನಕ್ಕೆ ಚಾರಣ ಮಾರ್ಗದಲ್ಲಿ ತೆರಳುವ ಭಕ್ತರಿಗೆ ಆತಂಕ ಎದುರಾಗಿದೆ. ಇದೀಗ ಇಲ್ಲಿನ ನರಸಿಂಹಸ್ವಾಮಿ ದೇವಸ್ಥಾನದ ಸಮೀಪದ ಚಿರತೆ ಮತ್ತು ಕರಡಿ ಸಂಚಾರ ಪತ್ತೆಯಾಗಿರುವುದು ಈ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಹೀಗಾಗಿ ಇಲ್ಲಿ ಚಾರಣ ತೆರಳುವ ಭಕ್ತರು ಅತ್ಯಂತ ಜಾಗರೂಕರಾಗಿರಬೇಕು ಎಂದು ಟಿಟಿಡಿ ಅಲರ್ಟ್ ಘೋಷಿಸಿದೆ
ಕಾಲ್ನಡಿಗೆ ಮುೂಲಕ ತಿರುಮಲ ಏರಿ ತಿರುಪತಿ ದರ್ಶನಕ್ಕೆ ತೆರಳುವ ಭಕ್ತರಿಗೆ ಮತ್ತೆ ಚಿರತೆ ಆತಂಕ ಶುರುವಾಗಿದೆ. ಅಲಿಪಿರಿ ಮೂಲಕ ತಿರುಮಲಕ್ಕೆ ತೆರಳುವ ಪಾದಚಾರಿ ಮಾರ್ಗದಲ್ಲಿ ಸಿಗುವ ನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಅಕ್ಚೋಬರ್ 24ರಿಂದ 27ರ ಅವಧಿಯಲ್ಲಿ ಚಿರತೆ ಮತ್ತು ಕರಡಿಗಳ ಸಂಚರಿಸಿರುವುದು ಪತ್ತೆಯಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ(TTD) ಯ ಮೂಲಗಳು ತಿಳಿಸಿವೆ.
ಇಲ್ಲಿನ ಅರಣ್ಯ ಪ್ರದೇಶದೊಳಗೆ ಅಳವಡಿಸಲಾಗಿರುವ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿಯ ಚಲನವಲನಗಳು ಪತ್ತಯಾಗಿವೆ. ಹೀಗಾಗಿ ಅಲಿಪಿರಿ ಪಾದಚಾರಿ ಮಾರ್ಗದ ಮೂಲಕ ಚಾರಣ ನಡೆಸಿ ತೆರಳುವ ಭಕ್ತರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಟಿಟಿಡಿ ಮನವಿ ಮಾಡಿದೆ.