ಮನೆಯೊಳಗೆ ಕುರಿ ಮೇಕೆಗಳನ್ನ ಬಿಟ್ಟು ಮನೆ ಸೀಜ್
1 min readಖಾಸಗಿ ಪೈನಾನ್ಸ್ ಸಿಬ್ಬಂದಿಯಿ0ದ ಅಮಾನವೀಯ ಕೃತ್ಯ
ಮನೆಯೊಳಗೆ ಕುರಿ ಮೇಕೆಗಳನ್ನ ಬಿಟ್ಟು ಮನೆ ಸೀಜ್
ಕಳೆದ 2 ತಿಂಗಳಿ0ದ ಲಾಕ್ ಆದ ಮನೆಯಲ್ಲೆ ಇದ್ದ ಜಾನುವಾರುಗಳು
ಏಣಿ ಮೇಲೆ ಏರಿ ವೃದ್ದ ದಂಪತಿಯಿ0ದ ಜಾನುವಾರುಗಳಿಗೆ ಮೇವು ನೀರು
ಆ ವೃದ್ದೆ ಮನೆ ಒಡೆಯನ ಚಿಕಿತ್ಸೆಗೆ ಅಂತ 2 ಲಕ್ಷ ಖಾಸಗಿ ಪೈನಾನ್ಸ್ ನಿಂದ ಸಾಲವಾಗಿ ಪಡೆದಿದ್ದು, 2 ಲಕ್ಷ ಸಂದಾಯ ಮಾಡಲಾಗಿದೆ. ಆದರೆ ಕಟ್ಟಿದ ಹಣ ಬಡ್ಡಿಗೆ ಸರಿ ಹೋಯ್ತು ಅಂತ ಮನೆಗೆ ಬಂದ ಸಿಬ್ಬಂದಿ, ವೃದ್ದರ ಬಳಿ ಅಮಾನವೀಯವಾಗಿ ನಡೆದುಕೊಳ್ಳುವ ಜೊತೆಗೆ ಜಾನುವಾರುಗಳನ್ನ ಮನೆಯಲ್ಲಿಟ್ಟು ಮನೆ ಲಾಕ್ ಮಾಡಿದ್ದು, ೨ ತಿಂಗಳ ನಂತರ ಕುರಿ ಮೇಕೆಗಳು ಇಂದು ರಿಲೀಸ್ ಆಗಿವೆ.
ಮನೆ ಆಗೋ ಹೀಗೋ ಬೀಳುವ ಹಾಗಿದೆ. ಮನೆಯ ಮುಂಭಾಗದ ಗೇಟ್‌ಗೆ ಬೀಗ ಜಡಿದು ಸೀಲ್ ಮಾಡಿದ್ರೆ ವೃದ್ದ ದಂಪತಿ ಇಳಿ ವಯಸ್ಸಿನಲ್ಲು ಏಣಿ ಮೂಲಕ ಮಹಡಿ ಮೇಲಕ್ಕೆ ಹೋಗಿ ಮೇವು ನೀರನ್ನ ಹಾಕಿ ಬರ್ತಿದ್ದಾರೆ. ಅರೇ ಇದೇನಪ್ಪ ಮಹಡಿ ಮೇಲೆ ಮೇವು ನೀರು ಏನಕ್ಕೆ ಅಂತ ಮನೆಯ ಮಹಡಿ ಮೇಲಕ್ಕೆ ಹತ್ತಿ ನೋಡಿದವರಿಗೆ ಕಂಡಿದ್ದು ಪೈನಾನ್ಸ್ ಸಿಬ್ಬಂದಿಯ ಅಮಾನವೀಯ ಕೃತ್ಯ.
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದ ಜಯಲಕ್ಷಮ್ಮ ಮತ್ತು ನಾಗಪ್ಪ ಎಂಬ ಈ ದಂಪತಿ ಜೀವನೋಪಾಯಕ್ಕೆ ಅಂತ ಕುರಿ ಮತ್ತು ಮೇಕೆಗಳನ್ನ ಮೇಯಿಸಿಕೊಂಡಿದ್ದಾರೆ. ಹಳೆಯ ಮನೆಯಲ್ಲೆ ವಾಸವಾಗಿದ್ದು, ಕಳೆದ ಒಂದು ವರ್ಷದಿಂದೆ ವೃದ್ದ ನಾಗಪ್ಪಗೆ ಅನಾರೋಗ್ಯವಾಗಿದೆ. ಜನಸ್ಮಾಲ್ ಪೈನಾನ್ಸ್ ಬ್ಯಾಂಕ್ ನಿಂದ 2 ಲಕ್ಷ ಸಾಲ ಪಡೆದಿದ್ರಂತೆ. ಜೊತೆಗೆ 1 ಲಕ್ಷ 90 ಸಾವಿರ ವೃದ್ದೆ ತೀರಿಸಿದ್ದು, ಉಳಿದ ಹಣ ಕಟ್ಟಲು ತಡ ಮಾಡಿದ್ದಾರೆ.
ಹೀಗಾಗಿ ಕಟ್ಟಿದ ಹಣ ಬಡ್ಡಿಗೆ ಸರಿಹೋಯ್ತು ಅಸಲು ಕಟ್ಟಬೇಕು ಅಂತ ಮನೆ ಬಳಿಗೆ ಬಂದ ಪೈನಾನ್ಸ್ ಸಿಬ್ಬಂದಿ ಮನೆಯಲ್ಲೆ ಕುರಿ ಮೇಕೆ ಮತ್ತು ಕೋಳಿಯನ್ನ ಬಿಟ್ಟು ಮನೆಗೆ ಬೀಗ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ. ಹೀಗಾಗಿ ಕಳೆದ ಎರಡು ತಿಂಗಳಿನಿ0ದ ಮನೆಯ ಮೇಲ್ಚಾವಣಿಗೆ ಏಣಿ ಹಾಕಿಕೊಂಡು ಜಾನುವಾರುಗಳಿಗೆ ವೃದ್ದ ದಂಪತಿ ಮೇವು ನೀರು ನೀಡುತ್ತಾ ಮನೆಯಿಲ್ಲದೆ ಪರದಾಡಿದ್ದಾರೆ.
ಬಾಲಕೃಷ್ಣ ದೇವನಹಳ್ಳಿ ತಹಶೀಲ್ದಾರ್
ಒಟ್ಟಾರೆ ವೃದ್ದರು ಜಾನುವಾರುಗಳನ್ನ ಮನೆಯಲ್ಲಿಟ್ಟು ಖಾಸಗಿ ಪೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದಿದ್ದು, ನಿಜಕ್ಕೂ ಅಮಾನವೀಯ. ಖಾಸಗಿ ಪೈನಾನ್ಸ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ತಹಶೀಲ್ದಾರ್ ಮುಂದಾಗಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಖಾಸಗಿ ಪೈನಾನ್ಸ್ ಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡಬೇಕಿದೆ.