ದೊಡ್ಡಬಳ್ಳಾಪುರದಲ್ಲಿ ವಕೀಲರ ದಿನಾಚರಣೆ
1 min readದೊಡ್ಡಬಳ್ಳಾಪುರದಲ್ಲಿ ವಕೀಲರ ದಿನಾಚರಣೆ ಕನ್ನಡ ರಾಜ್ಯೋತ್ಸವ, ವಕೀಲರ ದಿನಾಚರಣೆ ಕನ್ನಡದಲ್ಲಿ ವಾದ ಮಂಡನೆಗೆ ನ್ಯಾಯಾಧೀಶರ ಸಲಹೆ
ನ್ಯಾಯಾಲಯಗಳಲ್ಲಿ ಮಾತೃಭಾಷೆಯಾದ ಕನ್ನಡದಲ್ಲಿ ವಾದ ಮಂಡನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು
ದೊಡ್ಡಬಳ್ಳಾಪುರದ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆ ಇದ್ದು, ಕನ್ನಡ ಭಾಷೆಯಲ್ಲಿ ತೀರ್ಪು ಬರೆಯುವ ಹಲವು ಜಡ್ಜ್ ಗಳಿಗೆ ಗೌರವಿಸುವ ಅಭ್ಯಾಸ ಸಂತಸದ ವಿಷಯವಾಗಿದೆ ಎಂದರು.
ವಕೀಲರ ಸಂಘಕ್ಕೆ ಹೊಸ ಕಟ್ಟಡದ ಅಗತ್ಯವಿದ್ದು, ಶೀಘ್ರವೇ ಹೊಸ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ವಕೀಲ ರವಿ ಮಾವಿನಕುಂಟೆ ಮಾತನಾಡಿ, ವಾಣಿಜ್ಯ ವಿಚಾರಕ್ಕಾಗಿ ಕನ್ನಡ ಭಾಷೆಯನ್ನು ತಾತ್ಸಾರ ಮಾಡುವ ವ್ಯಾಪಾರಸ್ಥರಿಗೆ ನಾಚಿಕೆಯಾಗಬೇಕು, ನಮ್ಮ ಮಾತೃಭಾಷೆಯನ್ನು ಬಿಟ್ಟು ಪರ ಭಾಷೆ ಬಳಸಲು ಮುಂದಾಗಿರುವ ವರ್ತನೆ ನಿಲ್ಲಬೇಕಿದೆ ಎಂದರು.