ದಕ್ಷಿಣ ಕಾಶಿಯಲ್ಲಿ ಕಡೇ ಕಾರ್ತಿಕ ಸೋಮವಾರ ವಿಶೇಷ
1 min readದಕ್ಷಿಣ ಕಾಶಿಯಲ್ಲಿ ಕಡೇ ಕಾರ್ತಿಕ ಸೋಮವಾರ ವಿಶೇಷ
ರಾತ್ರಿಯಲ್ಲಿ ಕಂಗೊಳಿಸಿದ ನಂಡುAಡೇಶ್ವರ ದೇವಾಲಯ
ಕಡೇ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡಿನ ನಂಜುAಡೇಶ್ವರ ದೇವಾಲಯ ವಿಶೇಷ ಅಲಂಕಾರದಿAದ ಕಂಗೊಳಿಸುತ್ತಿತ್ತು. ಸೋಮವಾರ ಇಡೀ ದಿನ ಪೂಜೆಗಳು ನಡೆದರೆ, ಸಂಜೆಯಾಗುತ್ತಿದ್ದAತೆ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ದೀವಟಿಗೆ ಸೇವೆ ಸಲ್ಲಿಸಿ ಪುನೀತರಾದರು.
ಕೊನೇ ಕಾರ್ತಿಕ ಮಾಸ ಹಿನ್ನೆಲೆ ನಂಜನಗೂಡಿನ ಶ್ರೀ ನಂಜುAಡೇಶ್ವರ ದೇವಾಲಯ ಕಂಗೊಳಿಸುತ್ತಿತ್ತು. ದೂರ ದೂರದಿಂದ ಬಂದ ಭಕ್ತರುದೇವರಿಗೆ ದೀವಟಿಗೆ ಸೇವೆ ಸಲ್ಲಿಸಿದರು. ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಯಾತ್ರಾ ಸ್ಥಳವಾಗಿ ನಂಜನಗೂಡು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.
ಕಪಿಲಾ ನದಿ ತೀರದಲ್ಲಿ ನಂಜುAಡೇಶ್ವರ ನೆಲೆಗೊಂಡು ಪುಣ್ಯಕ್ಷೇತ್ರವಾಗಿ ನಂಜನಗೂಡು ಮನೆ ಮಾತಾಗಿದೆ. ದೂರದ ಊರುಗಳಿಂದ ಸಾವಿರಾರು ಭಕ್ತರು ಬಂದು ತಮ್ಮ ಹರಕೆ ಮತ್ತು ಕಾಣಿಕೆಗಳಿಂದ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಕಾರ್ತಿಕ ಮಾಸದಲ್ಲಿ ಶಿವನ ದೇವಸ್ಥಾನಕ್ಕೆ ಭಕ್ತಿಯಿಂದ ದೀಪ ಹಚ್ಚಿದರೆ ಮನೆಯಲ್ಲಿ ಜ್ಞಾನದ ಜ್ಯೋತಿ ಹಚ್ಚಿದಂತೆ ಎಂಬುದು ಭಕ್ತರ ನಂಬಿಕೆಯಾಗಿದೆ.
ದೇವಾಲಯದ ಆವರಣದಲ್ಲಿ ರಂಗೋಲಿ ಬಿಟ್ಟು ಚಿತ್ರದೊಳಗೆ ದೀಪಗಳ ಹಚ್ಚಿರುವುದು ಆಕರ್ಷಣೆ ಆಗಿತ್ತು. ಭಕ್ತರಿಗೆ ದೀಪ ಹಚ್ಚಲು ಅನುಕೂಲವಾಗುವಂತೆ ದೇವಾಲಯದ ಆವರಣ ಹಾಗೂ ದೇವಾಲಯದ ಮುಂಭಾಗ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು.