ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಮಹಾಕಾಳಿ ದೇಗುಲದಲ್ಲಿ ಲಕ್ಷ್ಮೀವೆಂಕಟರಮಣಸ್ವಾಮಿ ಕಲ್ಯಾಣೋತ್ಸವ

1 min read

ಮಹಾಕಾಳಿ ದೇಗುಲದಲ್ಲಿ ಲಕ್ಷ್ಮೀವೆಂಕಟರಮಣಸ್ವಾಮಿ ಕಲ್ಯಾಣೋತ್ಸವ
ಕಳೆದ 4 ದಿನಗಳಿಂದ ನಡೆಯುತ್ತಿರುವ ಮಹಾಕಾಳಿ ಅಮ್ಮನವರ ಪೂಜೆಗಳು
ಒಂದು ವಾರದ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು

ಚಿಕ್ಕಬಳ್ಳಾಪುರ ನಗರದ ಮಹಾಕಾಳಿ ರಸ್ತೆಯಲ್ಲಿರುವ ಮಹಾಕಾಳಿ ಅಮ್ಮನವರ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರದಿಂದ ಅದ್ಧೂರಿಯಾಗಿ ಆರಂಭವಾಗಿದ್ದು, ಸತತವಾಗಿ ಜುಲೈ 20ರವರೆಗೂ ನಡೆಯಲಿದೆ. ಇಂದು ಲಕ್ಷ್ಮೀವೆಂಕಟರಮಣಸ್ವಾಮಿ ಕಲ್ಯಾಣೋತ್ಸವ ವಿಜೃಂಭಣೆಯಿoದ ನೆರವೇರಿತು.

ಚಿಕ್ಕಬಳ್ಳಾಪುರ ನಗರದ ಮಹಾಕಾಳಿ ರಸ್ತೆಯಲ್ಲಿರುವ ಮಹಾಕಾಳಿ ಅಮ್ಮನವರ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ ಮತ್ತು ಪಂಚಮ ಕಲ್ಯಾಣೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಸೋಮವಾರ ಆರಂಭವಾದ ದೇವಾಲಯ ಧಾರ್ಮಿಕ ಕಾರ್ಯಕ್ರಮಗಳು ಸತತವಾಗಿ ಜುಲೈ 20ರವರೆಗೂ ನಡೆಯಲಿದೆ. ಲೋಕ ಕಲ್ಯಾಣಾರ್ಥವಾಗಿ ಮಹಾಕಾಳಿ ಸನ್ನಿಧಿಯಲ್ಲಿ ದಾರಿದ್ರ ನಿವಾರಣೆ, ವಾಮಾಚಾರ ದೋಷ ಪರಿಹಾರ, ದುಷ್ಟಗ್ರಹ ಪೀಡೆ ಪರಿಹಾರ, ಅಭಿಚಾರ ದೋಷ ಪರಿಹಾರ ಸೇರಿದಂತೆ ವಿವಿಧ ಹೋಮ ಮತ್ತು ಹವನಗಳು ನಡೆಯಲಿವೆ.

ಅಲ್ಲದೆ ಗಿರಿಜಾ ಕಲ್ಯಾಣೋತ್ಸವ ಸುಬ್ರಹ್ಮಣ್ಯೇಶ್ವರ ಕಲ್ಯಾಣೋತ್ಸವ, ಸೀತಾರಾಮ ಕಲ್ಯಾಣೋತ್ಸವ, ಲಕ್ಷ್ಮೀ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವ, ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವಗಳು ಪ್ರತಿನಿತ್ಯ ನಡೆಯಲಿವೆ. ಜೊತೆಗೆ ಪ್ರತಿ ದಿನ ಬೆಳಗ್ಗೆ ಮಹಾಕಾಳಿ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಇಂದು ಬೆಳಗ್ಗೆ ಮಹಾಕಾಳಿ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರದ ಜೊತೆಗೆ ಲಕ್ಷ್ಮೀವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವ ವಿಜೃಂಭಣೆಯoದ ನೆರವೇರಿತು. 19 ರಂದು ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. 20 ರಂದು ಶನಿವಾರ ಬೆಂಗಳೂರಿನ ಪ್ರಸಿದ್ಧ ರವಿಶಂಕರ್ ತಂಡದಿoದ ತಮಟೆ ವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಸೇರಿದಂತೆ ವಿವಿಧ ಜಾನಪದ ಕಲಾ ಮೇಳಗಳು ಪ್ರದರ್ಶನ ನಡೆಯಲಿವೆ.

About The Author

Leave a Reply

Your email address will not be published. Required fields are marked *