ಕಲ್ಲೂರು ಗ್ರಾಮದ ಕೆರೆ ಒತ್ತುವರಿ ತೆರವು
1 min readಕಲ್ಲೂರು ಗ್ರಾಮದ ಕೆರೆ ಒತ್ತುವರಿ ತೆರವು
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕಲ್ಲೂರು
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಕೆರೆ ಒತ್ತುವರಿ ತೆರವು ಗೊಳಿಸಲಾಯಿತು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಸುಧೀಂದ್ರ, ಲೋಕಾಯುಕ್ತ ನಿರ್ದೇಶನದಂತೆ ಕೆರೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದರು.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಕೆರೆ ಒತ್ತುವರಿ ತೆರವು ಗೊಳಿಸಲಾಯಿತು. ಈ ವೇಳೆ ತಹಸೀಲ್ದಾರ್ ಸುಧೀಂದ್ರ ಮಾತನಾಡಿ, ರೈತರಿಗೆ ತೊಂದರೆ ಮಾಡುವ ಉದ್ದೇಶ ಇಲ್ಲ. ಆದರೆ ಕೆರೆ ಒತ್ತುವರಿ ವಿಚಾರಕ್ಕೆ ಸಂಬ0ಧಿಸಿ ಹಲವು ಬಾರಿ ರೈತರಿಗೆ ಸೂಚನೆ ನೀಡಿದ್ದರೂ ಪದೇ ಪದೇ ಮುಂದುವರಿಸುತ್ತಿರುವ ಕಾರಣ ಒತ್ತುವರಿ ತೆರವಗೊಳಿಸಲಾಗುತ್ತಿದೆ ಎಂದರು.
ಇದೇ ರೀತಿ ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳನು ಸರ್ವೇ ಮಾಡಿ, ಒತ್ತುವರಿ ತೆರವುಗೊಳಿಸಲಾಗುತ್ತದೆ. ಯಾವುದೇ ರೈತರು ಕೆರೆಗಳನ್ನು ಅತಿಕ್ರಮಣವಾಗಿ ಪ್ರವೇಶ ಮಾಡಿ ಬೆಳೆಗಳನ್ನು ಬೆಳೆದಿದ್ದರೆ ಕೂಡಲೇ ತಾವೇ ಒತ್ತುವರಿ ತೆರವುಗೊಳಿಸಬೇಕು. ಒಂದು ವೇಳೆ ನಾವು ತೆರವುಗೊಳಿಸಲು ಬಂದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ. ಕೆರೆಗಳನ್ನು ಉಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.