ಕೆವಿ ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಪ್ತಾಹ
1 min readಕೆವಿ ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಪ್ತಾಹ
ದಿನಗಳ ಕಾಲ ಪರಿಸರ ಮತ್ತು ಸಾಮಾಜಿಕ ಕಾರ್ಯಕ್ರಮಗಳು
ಗುಡಿಬಂಡೆಯಲ್ಲಿ ಸಪ್ತಾಹ ಚಾಲನೆ ನೀಡಿದ ಗುಂಪು ಮರದ ಆನಂದ್
ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ೪೬ನೇ ಹುಟ್ಟು ಹಬ್ಬದ ಪ್ರಯುಕ್ತ ಗುಡಿಬಂಡೆಯಲ್ಲಿ ಅವರ ಅಭಿಮಾನಿಗಳಿಂದ ನವೀನ್ ಕಿರಣ್ ಪರಿಸರ ಸಪ್ತಾಹ ಎಂಬ ೭ದಿವಸಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಪ್ತಾಹ ಮೊದಲ ದಿನವಾದ ಇಂದು ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಕೆವಿ ನವೀನ್ ಕಿರಣ್ ಒಬ್ಬ ವ್ಯಕ್ತಿಯಲ್ಲ, ಸಮಾಜ ಸೇವೆಯ ಶಕ್ತಿ. ನವೀನ್ ಕಿರಣ್ ಅವರು ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ. ಅವರ ಶಿP್ಷÀಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಹಾಗೆ ಜೀವನ ಕಟ್ಟಿಕೊಂಡ
ವಿದ್ಯಾರ್ಥಿಗಳು ಎಲ್ಲಿಯೇ ಇದ್ದರೂ ತಮ್ಮ ನೆಚ್ಚಿನ ನಾಯಕ ನವೀನ್ ಕಿರಣ್ ಅವರನ್ನು ಮರೆಯುವುದಿಲ್ಲ ಎಂಬುದಕ್ಕೆ ಇತ್ತೀಚಿಗೆ ನಡೆದ ರಕ್ತದಾನ ಶಿಬಿರವೇ ಸಾಕ್ಷಿಯಾಗಿದೆ. ಬರೋಬ್ಬರಿ ೨ ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ರಾಜ್ಯದಲ್ಲಿಯೇ ದಾಖಲೆ ನಿರ್ಮಿಸಿದ ನವೀನ್ ಕಿರಣ್ ಅವರ ಅಭಿಮಾನಿಗಳು ಅದೇ ನವೀನ್ ಕಿರಣ್ ಅವರ ಹುಟ್ಟುಹಬ್ಬ ಎಂದರೆ ಸುಮ್ನಮನಿರಲು ಸಾಧ್ಯವೇ. ಅಂತಹ ಮಾಸ್ ನಾಯಕರಾಗಿ ಖ್ಯಾತಿ ಪಡೆದಿರುವ ನವೀನ್ ಕಿರಣ್ ಅವರ ಜನ್ಮದಿನ ಇರುವ ಹಿನ್ನೆಲೆಯಲ್ಲಿ ಗುಡಿಬಂಡೆಯಲ್ಲಿ ನವೀನ್ ಕಿರಣ್ ಅವರ ಪರಿಸರ ಸ್ತಾಹ ಆರಂಭ0ವಾಗಿದ್ದು, ಮುಂದಿನ ೭ ದಿನಗಳ ಕಾಲ ವಿವಿಧ ಸಾಮಾಜಿಕ ಮತ್ತು ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧೆರಿಸಲಾಗಿದೆ.
ಗುಡಿಬಂಡೆಯಲ್ಲಿ ಇಂದು ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್, ಪರಿಸರ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಉರ್ದು ಸಾಹಿತ್ಯ ಪರಿಷತ್ ಗ್ರಂಥಾಲಯಕ್ಕೆ ರಾಷ್ಟç ನಾಯಕರ, ಕನ್ನಡ ಕವಿಗಳ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಈ ವೇಳೆ ಕೆವಿ ನವೀನ್ ಕಿರಣ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ನೇತೃತ್ವ ವಹಿಸಿದ್ದರು.
ಈ ಸಂದಭÀðದಲ್ಲಿ ಮಾತನಾಡಿದ ಗುಂಪು ಮರದ ಆನಂದ್, ಶಿಕ್ಷಣ ಪ್ರೇಮಿಗಳು, ಕ್ರೀಡಾ ಪ್ರೇಮಿಗಳು, ರಕ್ತದಾನಿಗಳು ಆಗಿರುವ ಕೆವಿ ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬ ವನ್ನು 7 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ. ಇಂದು ಗುಡಿಬಂಡೆಯಲ್ಲಿ ಕನ್ನಡ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೀನ್ ಕಿರಣ್ ಅವರ ಸಾಧನೆಗಳನ್ನು, ಸಹಾಯದ ಗುಣಗಳನ್ನು ಪರಿಚಯಿಸುವ ಕೆಲಸ ಇದಾಗಿದೆ ಎಂದು ತಿಳಿಸಿದರು. ಜೊತೆಗೆ ೨೧೪೮ ಯೂನಿಟ್ ರಕ್ತ ಸಂಗ್ರಹಿಸಿ, ರಾಜ್ಯ ದಾಖಲೆ ಮಾಡಿದ ಕೀರ್ತಿ ನವೀನ್ ಕಿರಣ್ ಅವರಿಗೆ ಸಲ್ಲುತ್ತದೆ.ಅಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ ಮಾಡುವುದು ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಎಂದರು.
ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಜೀರ್. ಗುಡಿಬಂಡೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಮಂಜುನಾಥ್, ಜೈ ಕರ್ನಾಟಕ ತಾಲೂಕು ಅಧ್ಯಕ್ಷ ಬುಲೆಟ್ ಸೀನ. ಶಫಿವುಲ್ಲಾ. ಅಸ್ಲಾಂ ಪಾಷಾ. ಬಾಬಾ ಜಾನ್. ಡಾ. ರಾಜೇಶ್. ಗೋರಾ. ಬಾಬು ಉಪಸ್ಥಿತರಿದ್ದರು.