ಕುವೆಂಪು ಅವರ 119ನೇ ಜನ್ಮದಿನಾಚರಣೆ ಎಸ್. ಜೆ. ಸಿ. ಐ. ಟಿ. ತಾಂತ್ರಿಕ ಮಹಾವಿದ್ಯಾಲಯದಿಂದ ಆಚರಣೆ
1 min read
ಕುವೆಂಪು ಅವರ 119ನೇ ಜನ್ಮದಿನಾಚರಣೆ ಎಸ್. ಜೆ. ಸಿ. ಐ. ಟಿ. ತಾಂತ್ರಿಕ ಮಹಾವಿದ್ಯಾಲಯದಿಂದ ಆಚರಣೆ
ಚಿಕ್ಕಬಳ್ಳಾಪುರ ಹೊರವಲಯದ ಎಸ್ ಜೆಸಿಐಟಿ ಕ್ಯಾಂಪಸ್ ನಲ್ಲಿ ರಾಷ್ಟ್ರಕವಿ ಕುವೆಂಪು ಅವರ 119 ನೇ ಜನ್ಮದಿನಾಚರಣೆ ಮತ್ತು
ಕನ್ನಡ ರಾಜ್ಯೋತ್ಸವವನ್ನು ಅದೂರಿಯಾಗಿ ಆಚರಿಸಲಾಯಿತು.
ಈ ವೇಳೆ ಡೊಳ್ಳು ಮತ್ತು ತಮಟೆ ಸದ್ದಿಗೆ ಯುವಕ, ಯುವತಿಯರ ಕುಣಿದು ಕುಪ್ಪಳ್ಳಿಸಿದರು. ಕಾಲೇಜಿನ ಹೆಬ್ಬಾಗಿಲಿನಿಂದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕನ್ನಡದ ಬಾವುಟ ಹಿಡಿದು, ಡೊಳ್ಳು ಮತ್ತು ತಮಟೆ ಸದ್ದಿಗೆ ರಸ್ತೆಯ ಉದ್ದಕ್ಕೂ ಕುಣಿದು ಚಿಕ್ಕಬಳ್ಳಾಪುರ ಶಾಖಾ ಮಠದ ಮುಖ್ಯಸ್ಥ ಮಂಗಳಾನಾಥ ಸ್ವಾಮಿಜಿ ಹಾಗೂ ಅತಿಥಿಗಳನ್ನ ಆಡಿಟ್ ರೂಮ್ ಗೆ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ಮಂಗಳನಾಥ ಸ್ವಾಮೀಜಿ, ಕುವೆಂಪು ಅವರು ಬರೆದ ಕೆಲ ಕವನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಲಾವಿದರಾದ ಮುಖವೀಣೆ ಅಂಜಿನಪ್ಪ ತಮ್ಮ ಪ್ರತಿಭೆ ಪ್ರದರ್ಶಿಸಿ ಎಲ್ಲಾ ವಿದ್ಯಾರ್ಥಿಗಳ ಗಮನ ಸೆಳೆದರು. ತಮಟೆ ಕಲಾವಿದ ಪದ್ಮಶ್ರೀ ಡಾ. ಮುನಿ ವೆಂಕಟಪ್ಪ ತಮಟೆಯ ಪ್ರತಿಭೆ ತೋರಿದರು. ಡಾ. ಶಮಿತಾ ಮಲ್ನಾಡ್ ಕನ್ನಡದ ಬಗ್ಗೆ ಹಾಗೂ ಕುವೆಂಪು ಅವರ ಬಗ್ಗೆ ಕೆಲ ಮಾತುಗಳನ್ನು ಆಡಿದರು.