ಕುಪ್ಪಳ್ಳಿ ಶಾಲೆಗೆ ಶೀಘ್ರವೇ ರಸ್ತೆ ಅಭಿವೃದ್ದಿ ಭಾಗ್ಯ
1 min readಕುಪ್ಪಳ್ಳಿ ಶಾಲೆಗೆ ಶೀಘ್ರವೇ ರಸ್ತೆ ಅಭಿವೃದ್ದಿ ಭಾಗ್ಯ
ಗ್ರಾಮಪಂಚಾಯಿತಿ ಪಿಡಿಒ ಮೊಹನ್ ಬರವಸೆ
ಕುಪ್ಪಳ್ಳಿ ಶಾಲೆಗೆ 10 ಕಂಪ್ಯೂಟರ್ ವಿತರಣೆ
ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅತ್ಯುತ್ತಮ ಹೆಸರು ಗಳಿಸಿರುವ ಕುಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶತಮಾನದ ಆವರಣೆ ಅಂಚಿನಲ್ಲಿದ್ದು, ಶಾಲೆಗೆ ರಸ್ತೆಯಿಲ್ಲ ಅನ್ನೋ ಅಪವಾದದಿಂದ ದೂರವಾಗಬೇಕಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ರಸ್ತೆ ಮಾಡಲು ಇರುವ ಅಡೆ ತಡೆಗಳನ್ನ ಸರಿಪಡಿಸಿಕೊಡಬೇಕೆಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ದತ್ತ ಶಾಲೆ ಹಾಗೂ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರು ನೀಡಿದ ಕಂಪ್ಯೂಟರ್ ಶಾಲಾ ಸಿಬ್ಬಂದಿಗೆ ಹಸ್ತಾಂತರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಇಬ್ಬರು ಶಾಸಕರು, ಒಬ್ಬ ವಿಧಾನ ಪರಿಷತ್ ಸದಸ್ಯರು, ವೈದ್ಯರು, ಎಂಜನಿಯರುಗಳನ್ನ ಸೃಷ್ಟಿಸಿಕೊಟ್ಟ ಕುಪ್ಪಳ್ಳಿ ಸರ್ಕಾರಿ ಶಾಲೆಗೆ 2029ಕ್ಕೆ ನೂರು ವರ್ಷ ತುಂಬಿ ಶತಮಾನೋತ್ಸವ ಆಚರಣೆ ಹೊಸ್ತಿಲಲ್ಲಿದೆ. ಇದೇ ಶಾಲೆಯಲ್ಲಿ ತಾವೂ ಓದಿದ್ದು, ತಾವು ಶಾಸಕನಾದ ಮೇಲೆ ಈ ಶಾಲೆಗೆ ಕಾಂಪೌ0ಡ್, ಸಮಾರಂಭದ ವೇದಿಕೆ ನಿರ್ಮಾಣ ಮಾಡಿಕೊಟ್ಟಿರುವುದಾಗಿ ಹೇಳಿದರು.
ನ್ಯಾರೋಗೇಜ್ ರೈಲ್ವೆ ಟ್ರಾಕ್‌ನಿಂದ ಬ್ರಾಡ್ ಗೆಜ್ ಆದಮೇಲೆ ಶಾಲೆಗೆ ಬರುತಿದ್ದ ರಸ್ತೆ ಬಂದ್ ಆಗಿದೆ. ಊರೊಳಗಿಂದ ಶಾಲೆಗೆ ಬರುವ ರಸ್ತೆ ಅಬಿವೃದ್ದಿಗಾಗಿ ಇರುವ ಅಡೆತಡೆಗಳನ್ನ ಶೀಘ್ರದಲ್ಲಿಯೆ ಪರಿಹರಿಸಿಕೊಡಬೇಕು. ಅದಕ್ಕೆ ಗ್ರಾಮಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಮನಸು ಮಾಡಬೇಕು ಎಂದರು . 1929 ರಲ್ಲಿ ಪ್ರಾರಂಬವಾದ ಈ ಶಾಲೆ ಮುಂದಿನ ಮೂರು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಶತಮಾನೋತ್ಸವ ಸಂದರ್ಭಕ್ಕೆ ಎಲ್ಲರೂ ಇದೆ ಶಾಲೆಯಲ್ಲಿ ಮತ್ತೇ ಸೇರೋಣ ಇಲ್ಲಿನ ಶಾಲಾ ಶಿಕ್ಷಕರ ಪರಿಶ್ರಮದಿಂದ ೧೩೫ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಯಾವುದೆ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮೋಹನ್ ಮಾತನಾಡಿ, ಶಾಲೆಗೆ ರಸ್ತೆ ಇಲ್ಲದಿರುವ ವಿಚಾರ ಪಂಚಾಯಿತಿ ಗಮನಕ್ಕೆ ಬಂದಿದೆ. ಈಗಾಗಲೆ ಅಧ್ಯಕ್ಷರು ಊರಿನ ಸದಸ್ಯರೊಂದಿಗೆ ಚರ್ಚಿಸಿ ರಸ್ತೆ ಮಾಡಲು ಇರುವ ಅಡೆತಡೆ ನಿವಾರಿಸಿ, ರಸ್ತೆ ಮಾಡಿಕೊಡಲಾಗುವುದು ಎಂದರು. ನಮ್ಮೂರ ಸರ್ಕಾರಿ ಶಾಲೆಗೆ 10 ಕಂಪ್ಯೂಟರ್ ಕೊಟ್ಟು ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಮುಂದಾಗಿರುವ ಸಮಾನ ಮನಸ್ಕ ರಿಗೆ ಅಭಿನಂದನೆ ತಿಳಿಸಿದ ಅವರು, ಕಂಪ್ಯೂಟರ್ ಶಿಕ್ಷಣ ನೀಡಲು ಕೊರತೆ ಇರುವ ಶಿಕ್ಷಕರನ್ನ ನೇಮಿಸಲು ಪ್ರಯತ್ನ ಮಾಡುತ್ತೇವೆ ಎಂದರು
ಕಾರ್ಯಕ್ರಮದಲ್ಲಿ ಕುಡುವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಉಚಿತವಾಗಿ ಕಂಪ್ಯೂಟರ್ ವಿತರಿಸಲಾಯಿತು. ಈ ವೇಳೆ ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ರಘು, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ್, ಹೋಟೆಲ್ ರಾಮಣ್ಣ, ಗುಂಪುಮರದ ಆನಂದ್, ಹೆನ್ರಿ ಪ್ರಸನ್ನ ಕುಮಾರ್, ಇಬ್ರಾಹಿಂ ಕಲೀಲ್, ವಕೀಲ ಗಂಗರಾಜ್, ಶಾಲೆ ಮುಖ್ಯೋಪಾಧ್ಯಯ ವೆಂಕಟರವಣಪ್ಪ, ಕುಡುತಿ ಶಾಲೆ ಮುಖ್ಯೋಪಾಧ್ಯಯಿನಿ ಲತಾ ಇದ್ದರು.