Koppala: ಗಂಗಾವತಿಯಲ್ಲೊಂದು ನಾಚಿಕೆಗೇಡಿನ ಕೃತ್ಯ; ಪತಿ ಮೇಲೆ ಹಲ್ಲೆ ಪತ್ನಿ ಮೇಲೆ ಅತ್ಯಾಚಾರ?
1 min readಜಗಳಮಾಡಿಕೊಂಡಿದ್ದ ಗಂಡನನ್ನು (Husband) ಹುಡುಕಿಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿಗೆ (Gangavathi) ಬಂದಿದ್ದ ಬೆಂಗಳೂರು (Bengaluru) ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ. ಗಂಗಾವತಿ ಬಸ್ ನಿಲ್ದಾಣದಲ್ಲಿ ಗಂಡ-ಹೆಂಡತಿ ಕೌಟುಂಬಿಕ ಕಾರಣಕ್ಕೆ ಜಗಳವಾಡುತ್ತಿದ್ದರಂತೆ.
ಇದೇ ಸಮಯವನ್ನ ಬಳಸಿಕೊಂಡ ದುಷ್ಕರ್ಮಿಗಳ ಗುಂಪು, ಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯನ್ನು (Woman) ಪಕ್ಕದಲ್ಲಿದ್ದ ಪಾರ್ಕ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಗಂಗಾವತಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಗುಂಪಿನಲ್ಲಿದ್ದ ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಇತತರು ಆತನಿಗೆ ಕೃತ್ಯಕ್ಕೆ ಸಾಥ್ ನೀಡಿದ್ದರಂತೆ.
ಮಹಿಳೆ ಗಂಗಾವತಿ ಮೂಲದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕೌಟುಂಬಿಕ ಕಲಹದಿಂದ ಬಸ್ ನಿಲ್ದಾಣದಲ್ಲಿ ರಾತ್ರಿ 9:30ರ ಸಮಯದಲ್ಲಿ ದಂಪತಿ ಜಗಳವಾಡುತ್ತಿದ್ದರಂತೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿರಾತಕರ ಗುಂಪು ಸಂತ್ರಸ್ತೆ ಪತಿಯ ಮೇಲೆ ಹಲ್ಲೆ ಮಾಡಿದ್ದರಂತೆ. ಬಳಿಕ ಸಂತ್ರಸ್ತೆಯನ್ನು ಬಸ್ ನಿಲ್ದಾಣ ಬಳಿ ಇರುವ ಪಾರ್ಕೆಗೆ ಎಳೆದುಕೊಂಡು ಹೋಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಲಿಂಗರಾಜ್ ಎನ್ನುವವನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ಮೌಲಾಹುಸೇನ್, ಶಿವಕುಮಾರ್ ಸ್ವಾಮಿ, ಪ್ರಶಾಂತ್, ಮಹೇಶ, ಮಾದೇಶ ಎನ್ನುವವರು ಆರೋಪಿ ಸಾಥ್ ನೀಡಿದ್ದಾರಂತೆ. ಅತ್ಯಾಚಾರ ಎಸಗಿ ಲಿಂಗರಾಜ್ ಹಾಗೂ ಕಿರಾತಕರು ಸ್ಥಳದಿಂದ ಎಸ್ಕೇಪ್ ಆಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura