ಮೂಲ ಸೌಲಭ್ಯ ವಂಚಿತ ಕೊಡಮಡಗು ಗ್ರಾಪಂ
1 min readಮೂಲ ಸೌಲಭ್ಯ ವಂಚಿತ ಕೊಡಮಡಗು ಗ್ರಾಪಂ
ಚರoಡಿಗಳು ಕಟ್ಟಿಕೊಂಡು ವರ್ಷಗಳೇ ಕಳೆದರೂ ಸ್ವಚ್ಛತೆ ಇಲ್ಲ
ಸಾಂಕ್ರಾಮಿ ರೋಗ ಭೀತಿಯಲ್ಲಿ ಕೊಡಮಡಗು ಗ್ರಾಮಸ್ಥರು
ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊoಡಿರುವ ಕೊಡಮಡಗು ಗ್ರಾಮ ಪಂಚಾಯಿತಿ ಮೂಲ ಸೌಲಭಗಳಿಂದ ವಂಚಿತವಾಗಿದೆ. ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊoಡಿದ್ದು, ತ್ಯಾಜ್ಯ ನೀರು ನಿಂತ ನಿಂತು ನಾರುತ್ತಿದೆ. ಚರಂಡಿಯಿoದ ಬರುತ್ತಿರುವ ದುರ್ವಾಸನೆಯಿಂದ ಸಾರ್ವಜನಿಕರು ನರಕಯಾತನೆ ಅನಭವಿಸುತ್ತಿದ್ದಾರೆ.
ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊoಡಿರುವ ಕೊಡಮಡಗು ಗ್ರಾಮ ಪಂಚಾಯಿತಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊoಡಿದ್ದು, ತ್ಯಾಜ್ಯ ನೀರು ನಿಂತಲ್ಲೆ ನಿಂತು ನಾರುತ್ತಿದೆ. ಚರಂಡಿಯಿoದ ಬರುತ್ತಿರುವ ದುರ್ವಾಸನೆಯಿಂದ ಸಾರ್ವಜನಿಕರು ನರಕಯಾತನೆ ಅನುಭಸುತ್ತಿದ್ದಾರೆ. ಕೊಡಮಡಗು ಗ್ರಾಮದಲ್ಲಿ ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ತೀವ್ರ ತೊಂದರೆ ಅನಭವಿಸುವಂತಾಗಿದೆ.
ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಅವೈನಿಕ ಚರಂಡಿಗಳ ನಿರ್ಮಾಣದಿಂದಾಗಿ ಎಲ್ಲೆಂದರಲ್ಲೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಗ್ರಾಮದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಗ್ರಾಮ ಪಂಚಾಯಿತಿ ಮಾತ್ರ ತಮಗೂ ಇದಕ್ಕೂ ಸಂಬoಧವೇ ಇಲ್ಲ ಎನ್ನುವಂತೆ ಗ್ರಾಮ ಪಂಚಾಯಿತಿ ವರ್ತಿಸುತ್ತಿದೆ ಎಂದು ಸ್ಥಳೀರು ಆರೋಪಿಸಿದ್ದಾರೆ.
ಈ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ರಾಜ್ಯದಲ್ಲಿ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದೆ. ಪಂಚಾಯಿತಿ ಮಾತ್ರ ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ನಿರ್ಲಕ್ಷದ ವಿರುದ್ಧ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನ ಕಾಲ ಕಳೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಅವಾಂತರ ಸಂಭವಿಸೋದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.