ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಗೂಳೂರಿನಲ್ಲಿ ಎಸ್‌ಬಿಐನಿಂದ ಕಿಸಾನ್ ಗೋಷ್ಠಿ

1 min read

ಗೂಳೂರಿನಲ್ಲಿ ಎಸ್‌ಬಿಐನಿಂದ ಕಿಸಾನ್ ಗೋಷ್ಠಿ

ಕಾರ್ಯಕ್ರಮದಲ್ಲಿ ಸಾಧಕ ರೈತರಿಗೆ ಸನ್ಮಾನ

ದೇಶಕ್ಕೆ ಅನ್ನ ನೀಡುವ ರೈತ ಈ ದೇಶದ ಬೆನ್ನೆಲುಬು. ರೈತರೊಂದಿಗೆ ನೇರವಾಗಿ ಮುಖಾ ಮುಖಿ ಮಾತನಾಡಿ, ರೈತರಿಗೆ ನೆರವಾಗಲು ಭಾರತೀಯ ಸ್ಟೇಟ್ ಬ್ಯಾಂಕ್ ಮುಂಚೋಣಿಯಲ್ಲಿದೆ ಎಂದು ಎಸ್‌ಬಿಐ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಮಾರುತೇಶ್ ಅಭಿಪ್ರಾಯಪಟ್ಟರು.

ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿ0ದ ಅನ್ನದಾತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಿಸಾನ್ ಗೋಷ್ಠಿಯಲ್ಲಿ ರೈತರೊಂದಿಗೆ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಎಸ್‌ಬಿಐ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಮಾರುತೇಶ್, ರೈತರ ಅವಕಶ್ಯಕತೆಗಳನ್ನು ಪೂರೈಸಲು ಎಸ್‌ಬಿಐ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಉದ್ದೇಶ ರೈತರಿಗೆ ಬ್ಯಾಂಕ್‌ನಿ0ದ ಪಡೆಯಬಹುದಾಗ ಸೌಲಭ್ಯಗಳು, ಅನುಕೂಲಗಳ ಬಗ್ಗೆ ಮಾಹಿತಿ ನೀಡುವುದು ಎಂದರು.

ಪ್ರತಿಯೊಬ್ಬ ರೈತನೂ ಪ್ರಗತಿಪರ ರೈತರಾಗುವಂತೆ ಪ್ರೇರೇಪಿಸುವುದು. ಸಾಧಕ ರೈತರನ್ನು ಪ್ರೋತ್ಸಾಹಿಸುವುದು. ರೈತರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು ಮಾರ್ಗದರ್ಶನ ನೀಡುವುದು. ಗೂಳೂರು ಹೈನುಗಾರಿಕಗೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಪ್ರದೇಶವಾಗಿದೆ. ಇದು ಹೆಮ್ಮೆಯ ವಿಚಾರ. ಇಲ್ಲಿನ ಪ್ರಗತಿಪರ ರೈತರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು ಸೌಭಾಗ್ಯ. ಬ್ಯಾಂಕ್ ನಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಗಳಾಗಿ ಅಭಿವೃದ್ಧಿಹೊಂದಬೇಕು ಎಂದು ಹಾರೈಸಿದರು.

ಗ್ರಾಮೀಣ ಸಂಸ್ಕೃತಿ, ಜನರ ಸ್ವಭಾವ ನೋಡಿದಾಗ ಸಂತಸ ಮೂಡುತ್ತದೆ. ಒಟ್ಟು ಕುಟುಂಬಗಳು ಇಂದಿಗೂ ಇರುವ ಗ್ರಾಮಿಣ ಪ್ರದೇಶದ ಸನ್ನಿವೇಶ ಸಂತಸ ತರಿಸುತ್ತದೆ. ಬ್ಯಾಂಕ್ ಸೇವೆ ಮತ್ತಷ್ಠು ಸುಧಾರಿಸಲು ಕ್ರಮ ವಹಿಸಲಾಗುತ್ತದೆ ಎಂದರು. ವಿವಿಧ ಉಪಯೋಗಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಎಸ್‌ಬಿಐ ಸದಾ ಮುಂಚೋಣಿಯಲ್ಲಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲಾಗುತ್ತದೆ ಎಂದರು.

ಇಲ್ಲಿನ ಬ್ಯಾಂಕಿಗೆ ಸ್ಥಳಾವಕಾಶದ ಕೊರತೆ ಇದ್ದು, ಶೀಘ್ರವೇ ಅದನ್ನು ಪರಿಹರಿಸಿ ಜನರ ಬೇಡಿಕೆಯಂತೆ ಗೂಳೂರಿನಲ್ಲಿ ಎಟಿಎಮ್ ಬದಲಿಗೆ ಹಣ ಡ್ರಾ ಮಾಡುವುದು ಮತ್ತು ಜಮೆ ಮಾಡುವ ಯಂತ್ರವನ್ನು ಅಳವಡಿಸಲಾಗುತ್ತದೆ ಎಂದರು. ಸಂದ್ಯಾ ಶಿಬಿರ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ ಪ್ರಗತಿಪರ ರೈತರು, ಯುವ ಉದ್ಯಮಿಗಳನ್ನು ಎಸ್‌ಬಿಐನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪೂರ್ವಬಾವಿಯಾಗಿ ಗೂಳೂರು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಜನಪದ ನೃತ್ಯ ಮನಸೂರೆಗೊಂಡಿತು. ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟರಾಮಪ್ಪ, ವೆಂಕಟರಾಯಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೈಯಪ್ಪ, ಮಲ್ಲಿಕಾರ್ಜುನಪ್ಪ, ಪ್ರೌಡಶಾಲೆ ಮುಖ್ಯ ಶಿಕ್ಷಕ ವಿ.ವೆಂಕಟೇಶ್ ಇದ್ದರು.

About The Author

Leave a Reply

Your email address will not be published. Required fields are marked *