ಗುಪ್ತಾಂಗಕ್ಕೆ ಚಾಕು ಇರಿದು ಹತ್ಯೆ; ಬೀದಿಯಲ್ಲಿ ಬಿದ್ದಿದ್ದ ಶವವನ್ನುಕಚ್ಚಿ ತಿಂದ ಶ್ವಾನಗಳು
1 min readಕಳೆದ ಎರಡು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ ಯುವತಿಯೊಬ್ಬಳ ಮೃತದೇಹ ರಕ್ತಮಡುವಿನಲ್ಲಿ ಪತ್ತೆಯಾಗಿದ್ದು, ಅದನ್ನು ಬೀದಿನಾಯಿಗಳು ತಿಂದಿರುವ ಘಟನೆ ನವೀ ಮುಂಬೈನಲ್ಲಿ ನಡೆದಿದೆ. ಮೃತ ಯುವತಿ(Brutal Murder)ಯನ್ನು 22 ವರ್ಷದ ಯಶಶ್ರೀ(Yashashree) ಎಂದು ಗುರುತಿಸಲಾಗಿದ್ದು, ಆಕೆಯ ಜನನಾಂಗ ಮತ್ತು ಎದೆಯ ಭಾಗ ಸೇರಿದಂತೆ ಖಾಸಗಿ ಭಾಗಗಳನ್ನು ಬರ್ಬರವಾಗಿ ಇರಿಯಲಾಗಿದೆ.
ಶುಕ್ರವಾರ (ಜುಲೈ 26) ರಾತ್ರಿ ಮಹಿಳೆಯ ಮೃತದೇಹ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಅದನ್ನು ತಿನ್ನುತ್ತಿವೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ದೇಹವು ಆಕೆಯ ಎದೆ, ಸೊಂಟ, ಬೆನ್ನು ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಹಲವಾರು ಇರಿತದ ಗಾಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಆಕೆಯ ಮೂಳೆಗಳು ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.
ಯಶಶ್ರಿ ಶಿಂಧೆ ಮೃತ ದೇಹವು ನವಿ ಮುಂಬೈನ ಉರಾನ್ ತಾಲೂಕಿನಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ದಾವೂದ್ ಶೇಖ್ ಎಂಬಾತ ಆಕೆಯನ್ನು ಕೊಂದಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪೊಲೀಸರ ಪ್ರಕಾರ, ದಾವೂದ್ 2019 ರಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದಾಗ ಯಶಶ್ರೀಗೆ ಕಿರುಕುಳ ನೀಡಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಅವನು ಕರ್ನಾಟಕದ ತನ್ನ ಊರಿಗೆ ಹೋಗಿದ್ದನು. ಆದಾಗ್ಯೂ, ಕರೆ ದಾಖಲೆಗಳು ಆರೋಪಿಯೊಂದಿಗೆ ಹಲವಾರು ಗಂಟೆಗಳ ಕಾಲ ಮಾತನಾಡುತ್ತಿದ್ದಳು ಎಂದು ಸೂಚಿಸಿದೆ. ಇನ್ನು ಕೃತ್ಯದ ಸಂದರ್ಭದಲ್ಲಿ ದಾವೂದ್ ಆ ಸ್ಥಳದಲ್ಲಿ ಇದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇನ್ನು ದಾವೂದ್ ಬಂಧನಕ್ಕೆ ಕರ್ನಾಟಕಕ್ಕೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ. ಮತ್ತು ಈ ಆರೋಪಿಯ ಬಂಧನದ ನಂತರವೇ ಈ ಕೊಲೆಯ ಹಿಂದಿನ ಕಾರಣ ಸ್ಪಷ್ಟವಾಗಲಿದೆ.
ಇದಕ್ಕೂ ಮೊದಲು ಜುಲೈ 25 ರಂದು (ಗುರುವಾರ) ಯಶಶ್ರಿ ಶಿಂಧೆ ನಾಪತ್ತೆಯ ಬಗ್ಗೆ ಮೂಲತಃ ಆಕೆಯ ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಶನಿವಾರ ಆಕೆಯ ಶವ ಅತ್ಯಂತ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ವರದಿಯಾಗಿವೆ. ಆಕೆಯ ಭುಜದ ಮಾಂಸವನ್ನೂ ತಿಂದು ಹಾಕಿದ್ದ ಬೀದಿನಾಯಿಗಳು ಆಕೆಯ ಮುಖವನ್ನೂ ವಿರೂಪಗೊಳಿಸಿವೆ. ಅವಳ ಬಟ್ಟೆ ಮತ್ತು ಆಕೆಯ ಮೈಮೇಲಿದ್ದ ಟ್ಯಾಟೂ ಸಹಾಯದಿಂದ ಆಕೆಯ ಗುರುತು ಪತ್ತೆ ಹಚ್ಚಲಾಯಿತು.
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #ctv -news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #rtodaybreakingnews #chikkaballapuranews #flashnews #liveupdatenews @ctv-news