ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್
1 min readಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್
ಕ್ರಿಕೆಟ್ ಕ್ರೀಡೆಯಲ್ಲಿ ನೂತನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ
ಕ್ರಿಕೆಟ್ ಉತ್ಸಾಹ ಸಂಭ್ರಮಿಸುವ ಮತ್ತು ಹೊಸ ಪ್ರತಿಭೆಗಳನ್ನು ಗೌರವಿಸುವ ವಿನೂತನ ಪಂದ್ಯಾವಳಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್‌ನ್ನು ಅನಾವರಣಗೊಳಿಸಿ, ತಮ್ಮ ಪ್ರತಿಭೆ ತೋರಿಸಿಕೊಳ್ಳಲು ವೇದಿಕೆ ಸಜ್ಜಾಗಿದೆ ಎಂದು ಕೆಎಸ್‌ಪಿಎಲ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ `ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಪಿಎಲ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್, ವಿಶೇಷ ಕ್ರೀಡಾ ಪ್ರಯೋಗ ಕ್ರೀಡಾಪಟುಗಳ ಪ್ರತಿಭೆಯನ್ನು ಪರಿಚಯಿಸಲು ಮತ್ತು ಅವರ ನಡುವೆ ಸ್ನೇಹದ ಬಾಂಧವ್ಯ ಬೆಳೆಸಲು ಉತ್ತಮ ವೇದಿಕೆಯಾಗಲಿದ್ದು, ಇದರಲ್ಲಿ ಕರ್ನಾಟಕದ ಸಾಫ್ಟ್ ಬಾಲ್ ಕ್ರಿಕೆಟ್ ಆವೃತ್ತಿಯ ಉತ್ತಮ ಪ್ರತಿಭೆಗಳನ್ನು ಗುರುತಿಸಲು, ರಾಜ್ಯದ 31 ಜಿಲ್ಲೆಗಳಿಂದ ಒಟ್ಟು 32 ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ತಂಡಗಳು 240 ತಾಲೂಕುಗಳನ್ನು ಪ್ರತಿನಿಧಿಸುತ್ತಿದ್ದು, 699 ಮಂದಿ ಉತ್ತಮ ಕ್ರಿಕೆಟಿಗರು ತಮ್ಮ ಕೌಶಲ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ದೊಡ್ಡ ಮಟ್ಟದ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನೂ ತಮ್ಮ ಉತ್ಸಾಹ, ಕ್ರೀಡಾ ಮನೋಭವ ಮತ್ತು ಕೌಶಲ್ಯ ಮೈದಾನದಲ್ಲಿ ಪ್ರದರ್ಶಿಸುತ್ತಾರೆ. ಕರ್ನಾಟಕದ ನಾನಾ ಭಾಗಗಳಿಂದ 4 ಕೋಟಿಕ್ಕೂ ಹೆಚ್ಚು ಜನರು ಈ ಟೂರ್ನಿಯನ್ನು ಉತ್ಸಾಹದಿಂದ ವೀಕ್ಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಸಾಫ್ಟ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಪ್ರತಿಭೆಗಳು ಹರಿದು ಬರುತ್ತಿರುವ ಈ ಸಂದರ್ಭದಲ್ಲಿ, ಟೂರ್ನಿ ಈ ಕ್ರೀಡೆಗೆ ಮತ್ತಷ್ಟು ಖ್ಯಾತಿ ಮತ್ತು ಜನಪ್ರಿಯತೆ ತರಲಿದೆಯೆಂಬ ವಿಶ್ವಾಸವಿದೆ. ಚಿಕ್ಕವಯಸ್ಸಿನ ಕನಸಿಗೆ ಇಂದು ಸಹಕಾರ ಸಿಕ್ಕಿದ್ದು, ಬಹಳಷ್ಟು ಸಂತಸ ತರುತ್ತಿದೆ ಎಂದು ಕ್ರಿಕೆಟ್ ಗೆ ಆಯ್ಕೆಯಾದ ಚಿಕ್ಕಬಳ್ಳಾಪುರ ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು