ಕರ್ನಾಟಕ ಸಂಭ್ರಮ-50ರ ರಥ ಯಾತ್ರೆ ಪೂರ್ವಭಾವಿ ಸಭೆ
1 min read
ಕರ್ನಾಟಕ ಸಂಭ್ರಮ-50ರ ರಥ ಯಾತ್ರೆ ಪೂರ್ವಭಾವಿ ಸಭೆ
ಜುಲೈ 27ಕ್ಕೆ ಬಾಗೇಪಲ್ಲಿಗೆ ಕನ್ನಡ ರಥ ಆಗಮನ
ಅದ್ಧೂರಿ ಸ್ವಾಗತಕ್ಕೆ ತಹಸೀಲ್ದಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥ ಯಾತ್ರೆ ಬಾಗೇಪಲ್ಲಿ ತಾಲೂಕಿಗೆ 27 ರಂದು ಆಗಮಿಸಲಿದೆ. ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಂಘ, ಸಂಸ್ಥೆ, ಸಾಹಿತ್ಯ ಪರಿಷತ್ತುನಿಂದ ವಿಜೃಂಭಣೆಯಿoದ ಪೂರ್ಣಕುಂಬ ಮೂಲಕ ಸ್ವಾಗತಿಸಲು ತಹಶಿಲ್ದಾರ್ ಮನೀಷಾ ಮಹೇಶ್ ಪತ್ರಿ ಹೇಳಿದರು.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥ ಯಾತ್ರೆ ಬಾಗೇಪಲ್ಲಿ ತಾಲೂಕಿಗೆ 27 ರಂದು ಆಗಮಿಸಲಿದೆ. ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಂಘ, ಸಂಸ್ಥೆ, ಸಾಹಿತ್ಯ ಪರಿಷತ್ತುನಿಂದ ವಿಜೃಂಭಣೆಯಿoದ ಪೂರ್ಣಕುಂಬ ಮೂಲಕ ಸ್ವಾಗತಿಸಲು ತಹಶಿಲ್ದಾರ್ ಮನೀಷಾ ಮಹೇಶ್ ಪತ್ರಿ ಹೇಳಿದರು. ಇಂದು ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಿಗ್ಗೆ ಪಟ್ಟಣದ ಚಿತ್ರಾವತಿ ಸೇತುವೆಯಿಂದ ವಿವಿಧ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರ ಗಳ ಮೆರವಣಿಗೆ ಆರಂಭವಾಗಲಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ 50 ರ ಸಂಭ್ರಮದ ಜ್ಯೋತಿ ಯನ್ನು ಬರ ಮಾಡಿಕೊಂಡು ತಾಯಿ `ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತಾಗಿ ಚಾಲನೆ ನೀಡುವರು. ಮೆರವಣಿಗೆ ಚಿತ್ರಾವತಿ ಸೇತುವೆಯಿಂದ ಆರಂಭವಾಗಿ ನ್ಯಾಷನಲ್ ಕಾಲೇಜು ಅವರಣ ತಲುಪಲಿದೆ.
ಮಾರ್ಗದುದ್ದಕ್ಕೂ ಬೀದಿಗಳ ಇಕ್ಕೆಲಗಳಲ್ಲಿ ದೀಪಾಲಂಕಾರ ಮಾಡಬೇಕು. ಜೊತೆಗೆ ಕನ್ನಡ ಬಾವುಟ ಪ್ರಮುಖ ವೃತ್ತಗಳಲ್ಲಿ ಕಟ್ಟಬೇಕು, ದೀಪಾಲಂಕಾರ ಮಾಡಬೇಕು. ಎಂದು ಸೂಚಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ ಮಾತನಾಡಿ, ಗಡಿನಾಡಿಗೆ ಕರ್ನಾಟಕ ಸಂಭ್ರಮ ರಥ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಬಾವುಟಗಳು, ಶಾಲುಭರಿಸುವುದು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಶಿಕ್ಷಣ ಇಲಾಖೆ ಸಹಕಾರವನ್ನು ಪಡೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಆರ್. ವೆಂಕಟರಾಮ್, ರೇಷ್ಮೆ ಕೃಷಿ ನಿರ್ದೇಶಕ ಚಿನ್ನ ಕೈವಾರಮಯ್ಯ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.