ದಕ್ಷಿಣ ಕಾಶಿ ನಂಜನಗೂಡಿನಲ್ಲಿ ತುಂಬಿ ಹರಿಯುತ್ತಿರುವ ಕಪಿಲೆ
1 min readದಕ್ಷಿಣ ಕಾಶಿ ನಂಜನಗೂಡಿನಲ್ಲಿ ತುಂಬಿ ಹರಿಯುತ್ತಿರುವ ಕಪಿಲೆ
ಹದಿನಾರು ಕಾಲು ಮಂಟಪ, ಸೇರಿದಂತೆ ಸ್ಥಾನ ಘಟಕಗಳು ಮುಳುಗಡೆ
ಹೊರರಾಜ್ಯ ಕೇರಳದ ವೈನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ನಂಜನಗೂಡಿನ ಕಪಿಲ ನದಿಗೆ ಬಾರಿ ಪ್ರಮಾಣದ ನೀರು ಹೊರ ಬಿಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿದಿನ 20 ಸಾವಿರ ಕ್ಯೂಸಾಕ್ಸ್ ನೀರು ಕಬಿನಿ ಜಲಾಶಯದಿಂದ ಕಪಿಲ ನದಿಯ ಮೂಲಕ ಹೊರ ಬಿಡಲಾಗುತ್ತಿದೆ.
ಹೊರರಾಜ್ಯ ಕೇರಳದ ವೈನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ನಂಜನಗೂಡಿನ ಕಪಿಲ ನದಿಗೆ ಬಾರಿ ಪ್ರಮಾಣದ ನೀರು ಹೊರ ಬಿಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿದಿನ 20 ಸಾವಿರ ಕ್ಯೂಸಾಕ್ಸ್ ನೀರು ಕಬಿನಿ ಜಲಾಶಯದಿಂದ ಕಪಿಲ ನದಿಯ ಮೂಲಕ ಹೊರ ಬಿಡಲಾಗುತ್ತಿದೆ. ನಂಜನಗೂಡಿನ ನಂಜುoಡೇಶ್ವರನ ದೇವಾಲಯದ ಹದಿನಾರು ಕಾಲು ಮಂಟಪ ಸೇರಿದಂತೆ ದೇವಾಲಯದ ಸ್ಥಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ದೇವಾಲಯಕ್ಕೆ ಆಗಮಿಸುವ ಭಕ್ತರು ಯಾವುದೇ ಕಾರಣಕ್ಕೂ ನೀರು ಕಡಿಮೆಯಾಗುವ ತನಕ ಕಪಿಲಾ ನದಿಯ ದಡಕ್ಕೆ ತೆರಳದಂತೆ ದೇವಾಲಯದ ಆಡಳಿತ ಕಾರ್ಯನಿರ್ವಾಹಕ ಅಧಿಕಾರಿ ಆದೇಶದ ಮೇರೆಗೆ ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಕಪಿಲಾ ನದಿಯ ಅಂಚಿನಲ್ಲಿರುವ ನಂಜನಗೂಡು ಪಟ್ಟಣದ ಒಕ್ಕಲಗೇರಿ ತೋಪಿನ ಬೀದಿ ಸೇರಿದಂತೆ ಇನ್ನೂ ಅನೇಕ ಬಡಾವಣೆಗಳಿಗೆ ತಾಲೂಕು ಆಡಳಿತದಿಂದ ಜನ ಜನವಾರು ರಕ್ಷಣೆಗಾಗಿ ಬೇರೆಡೆಗೆ ಸ್ಥಳಾಂತರ ವಾಗಲು ಜಾಗೃತಿ ಮೂಡಿಸಲಾಗಿದೆ.
ರಾಜ್ಯದಲ್ಲಿ ಇನ್ನು ಮೂರು ನಾಲ್ಕು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಮೈಸೂರು ಜಿಲ್ಲಾ ಆಡಳಿತ ಕಪಿಲಾ ನದಿಯ ಅಂಚಿನಲ್ಲಿರುವ ಜನವಸತಿ ಪ್ರದೇಶಗಳಿಗೆ ಜಾಗೃತಿಗಾಗಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.