ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್

ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ

ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಸಂಭ್ರಮ

December 27, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಕನ್ನಡ ಸಿರಿ ಹಬ್ಬ ಅದ್ಧೂರಿ

1 min read

ಚಿಕ್ಕಬಳ್ಳಾಪುರದಲ್ಲಿ ಕನ್ನಡ ಸಿರಿ ಹಬ್ಬ ಅದ್ಧೂರಿ

ಗಡಿನಾಡಿನಲ್ಲಿ ಪಸರಿಸಿದ ಕನ್ನಡದ ಕಂಪು

ಚಿಕ್ಕಬಳ್ಳಾಪುರದಲ್ಲಿ ನಗರದಾದ್ಯಂತ ದೀಪಾಲಂಕಾರ, ಕನ್ನಡ ಭಾವುಟ ಹಾರಾಟ

ಎಲ್ಲೆಲ್ಲೂ ವಿದ್ಯುತ್ ದೀಪಗಳಿಂದ ಕಳೆ ಕಟ್ಟಿದ ಚಿಕ್ಕಬಳ್ಳಾಪುರ, ಝಗಮಗಿಸುತ್ತಿದ್ದ ಕನ್ನಡ ಭಾವುಟಗಳು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ೧೬ನೇ ಕನ್ನಡ ಸಿರಿ ಹಬ್ಬದ ಬೃಹತ್ ವೇದಿಕೆ ಗಣ್ಯಾತಿಗಣ್ಯರು, ಕಲಾವಿದರೊಂದಿಗೆ ಕಂಗೊಳಿಸುತ್ತಿತ್ತು. ಗಡಿ ನಾಡಿನಲ್ಲಿ ಕನ್ನಡ ಹಬ್ಬದ ಸಂಭ್ರಮ ಹೇಗಿತ್ತು ನೋಡೋಣ ಬನ್ನಿ.

ಹೌದು, ಚಿಕ್ಕಬಳ್ಳಾಪುರ ಗಡಿಯಲ್ಲಿದೆ. ಹಾಗಾಗಿಯೇ ಇಲ್ಲಿ ಕನ್ನಡಕ್ಕಿಂತ ಹೆಚ್ಚು ತೆಲುಗು ಪ್ರಾಬಲ್ಯ. ಆದರೆ ಕನ್ನಡ ಪರ ಸಂಘಟನೆಗಳ ನಿರಂತರ ಶ್ರಮ ಈ ಅಪವಾದಕ್ಕೆ ಕಳಂಕ ತಂದಿದೆ. ಇದಕ್ಕೆ ಉತ್ತಮ ಉದಾಹರಣೆಯೇ ರಾತ್ರಿ ನಡೆದ ಕನ್ನಡ ಸಿರಿ ಹಬ್ಬ. ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದ್ದ ಚಿಕ್ಕಬಳ್ಳಾಪುರದಲ್ಲಿ ಎಲ್ಲೆಲ್ಲೂ ಕನ್ನಡದ ಬಾವುಟ, ವಿದ್ಯುತ್ ದೀಪಾಲಂಕಾರದ ಝಗಮಗಿಸುವಿಕೆ ಕರ್ನಾಟಕ ರಕ್ಷಣಾ ವೇದಿಕೆ 16ನೇ ವರ್ಷದ ಕನ್ನಡ ಸಿರಿಹಬ್ಬದ ವಿಜೃಂಭಣೆಗೆ ನಿದರ್ಶನವಾಗಿತ್ತು.

ಕನ್ನಡ ಭಾಷೆಯ ಸೊಬಗು, ಮೆರುಗನ್ನ ಹೊರಸೂಸಲು ಸೂಕ್ತ ಶೀರ್ಷಿಕೆಯೊಂದಿಗೆ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಪ್ರವೀಣ್ ಶೆಟ್ಟಿ ಮಾತನಾಡಿ, ಕನ್ನಡಕ್ಕಾಗಿ ಹೋರಾಡಲು ಸದಾ ಸಿದ್ಧ, ಲಾಠಿ ಏಟು, ಜೈಲು ಇದಕ್ಕೆಲ್ಲಾ ನಮ್ಮ ಕನ್ನಡದ ಜೀವಗಳು ಮಣಿಯುವುದಿಲ್ಲ. ಭಾಷೆ ನೆಲ ಜಲ ವಿಷಯಕ್ಕೆ ಬಂದರೆ ಅವರ ತಲೆಗೆ ಬಿಸಿ ನೀರು ಕಾಯಿಸಲೂ ಕನ್ನಡಿಗರು ಸದಾ ಸಿದ್ಧ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ಕೆವಿವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆವಿ ನವೀನ್ ಕಿರಣ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಅಪ್ರತಿಮ ಹೋರಾಟಗಳನ್ನ, ಪಟ್ಟ ಕಷ್ಟಗಳನ್ನ ಹಾಗೂ ಚಿಕ್ಕಬಳ್ಳಾಪುರಕ್ಕೆ ತೆಲುಗು ನೆರಳು ಬೀಳುತ್ತಿದ್ದ ಪಕ್ಷದಲ್ಲೂ ಹೇಗೆ ಕನ್ನಡತನವನ್ನು ಉಳಿಸಿಕೊಂಡಿದೆ ಎಂಬ ಬಗ್ಗೆ ವಿವರಣೆ ನೀಡಿದರು. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಕನ್ನಡವನ್ನು ಹೆಚ್ಚು ಬಳಸಬೇಕು, ನಂತರ ಕನ್ನಡ ನಮ್ಮನ್ನು ಬೆಳೆಸುತ್ತದೆ ಎಂದು ಹೇಳುವ ಮೂಲಕ ನೆರದಿದ್ದವರಲ್ಲಿ ಕನ್ನಡತನವನ್ನು ಜಾಗೃತಿಗೊಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕೆಎಂಎಫ್ ಮಾಜಿ ಅಧ್ಯಕ್ಷ ಕೆವಿ ನಾಗರಾಜ್, ವಕೀಲ ಮುನೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ ಸಿ ರಾಜಕಾಂತ್, ಪಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ರಾಮೇಗೌಡ, ಜಿಲ್ಲಾ ಕಾರ್ಯಧ್ಯಕ್ಷ ಬಾಲು, ತಾಲೂಕು ಗೌರವಾಧ್ಯಕ್ಷ ಶ್ರೀನಿವಾಸ್, ಸಹಕಾರದರ್ಶಿ ಮಂಜುನಾಥ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಸಿಆರ್ ಮಹೇಶ್ ಇದ್ದರು.

About The Author

Leave a Reply

Your email address will not be published. Required fields are marked *