ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಅಖಿಲ ಭಾರತ ಸಮ್ಮೇಳನ ಹಿನ್ನೆಲೆಯಲ್ಲಿ ಕನ್ನಡ ರಥಯಾತ್ರೆ

1 min read

ಅಖಿಲ ಭಾರತ ಸಮ್ಮೇಳನ ಹಿನ್ನೆಲೆಯಲ್ಲಿ ಕನ್ನಡ ರಥಯಾತ್ರೆ
ಬೀದರ್‌ನಲ್ಲಿ ಸಾಹಿತಿ ಎಸ್.ಎಲ್. ಬೆರಪ್ಪ ಅದ್ಧೂರಿ ಸ್ವಾಗತ

ಮ0ಡ್ಯದಲ್ಲಿ ಆಯೋಜಿಸುತ್ತಿರುವ 87ನೇ ಅಖಿಲ ಭಾರತ ಸಮ್ಮೇಳನದ ಪ್ರಚಾರ ಪ್ರಸಾರದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕನ್ನಡ ರಥ ಯಾತ್ರೆ ನಡೆಸಲಾಗುತ್ತಿದೆ. ಇಂದು ಬೀದರ್‌ಜಿಲ್ಲೆಗೆ ರಥಯಾತ್ರೆ ಆಗಮಿಸಿದ್ದು, ಬಸವೇಶ್ವರ ವೃತ್ತದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಖ್ಯಾತ ಸಾಹಿತಿ ಡಾ. ಎಸ್ ಎಲ್ ಬೆರಪ್ಪನವರು ಮಾಲಾರ್ಪಣೆ ಮಾಡಿ ಜಿಲ್ಲೆಗೆ ಬರಮಾಡಿಕೊಂಡರು.

ರಥವನ್ನು ಜಿಲ್ಲೆಗೆ ಸ್ವಾಗತಿಸಿ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್. ಬೆರಪ್ಪ, ಕನ್ನಡ ಕಟ್ಟಿದ ಈ ನೆಲ ಶರಣರ ನಾಡಾಗಿದೆ. ಈ ಭವ್ಯ ಪರಂಪರೆಯನ್ನು ಮರೆಮಾಚದೆ ಉಳಿಸಿ ಬೆಳೆಸಲು ಸಮ್ಮೇಳನ ಆಯೋಜಿಸಿದೆ, ಎಲ್ಲರೂ ಕನ್ನಡ ನುಡಿ ಜಾತ್ರಗೆ ಕೈಜೋಡಿಸುವಂತೆ ಕರೆ ನೀಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಮ.ನು.ಬಳಿಗಾರ್ ಕನ್ನಡ ರಥ ಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ನಮ್ಮ ತಾಯಿ ಭಾಷೆ. ನಾವೆಲ್ಲರೂ ಇದನ್ನು ಬೆಳೆಸಲು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡದ ಕವಿರಾಜಮಾರ್ಗ ಕೊಟ್ಟ ನೆಲ ಬೀದರ್ ಎಂದು ಹೇಳಿದರು.

12ನೇ ಶತಮಾನದಲ್ಲಿ ಕಾಯಕ ದಾಸೋಹ ಜೊತೆಗೆ ಕನ್ನಡವನ್ನು ದೇವ ಭಾಷೆ ಮಾಡಿದವರು ಶರಣರು. ಸಕ್ಕರೆ ನಾಡಿನ ಸಮ್ಮೇಳನ ಕ್ಕೆ ಗಡಿಭಾಗದ ಕನ್ನಡಿಗರು ಪಾಲ್ಗೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಮನಾಬಾದ್ ತಾಲೂಕಿನ ದಂಡಾಧಿಕಾರಿ ಅಂಜುಮ ತಬಸುಮ್ ವಹಿಸಿ ಮಾತನಾಡಿ, ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷ ವಾಗುವದು ಎಂಬ ಕವಿ ಹೃದಯ ನೆನಪು ಮಾಡಿಕೊಂಡು ಕನ್ನಡ ನಾಡು ನುಡಿ ಬೆಳವಣಿಗೆಯಾದರೆ ನಮ್ಮ ಸಂಸ್ಕತಿ ಉಳಿಯಬಲ್ಲುದಾಗಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನ್ನಶಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಡಿಸೆಂಬರ್ 20,21 ಹಾಗೂ 22 ರಂದು ಕಸಾಪ ರಾಜ್ಯಾಧ್ಯಕ್ಷ ಡಾ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಿದ್ದು, ಕನ್ನಡ ಜ್ಯೋತಿ ಯಾತ್ರೆ ಕನ್ನಡ ರಥ ಇಂದು ಸಾಂಸ್ಕೃತಿಕ ಭವನೆಗಳನ್ನು ಬೆಸೆಯಲು ಮಂಡ್ಯದಿ0ದ ಬೀದರ್‌ಗೆ ಆಗಮಿಸಿದೆ, ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರಯಾಣಿಸಲಿದ್ದು ಎಲ್ಲ ಕನ್ನಡ ಮನಸ್ಸುಗಳು ಸಹಕರಿಸಲು ಮನವಿ ಮಾಡಿದರು.

About The Author

Leave a Reply

Your email address will not be published. Required fields are marked *