ಅನ್ನಸಂತರ್ಪಣೆ ಮೂಲಕ ಕನ್ನಡ ರಾಜ್ಯೋತ್ಸವ
1 min read
ಅನ್ನಸಂತರ್ಪಣೆ ಮೂಲಕ ಕನ್ನಡ ರಾಜ್ಯೋತ್ಸವ
ಕನ್ನಡದ ಹಿರಿಮೆಯ ಬಗ್ಗೆ ಕೊಂಡಾಡಿದ ಗಣ್ಯರು
ನಂಜನಗೂಡು ನಗರದ ಹುಲ್ಲಹಳ್ಳಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿ ಶನೇಶ್ವರ ಗೂಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದಿ0ದ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಚಿಕ್ಕರಂಗನಾಯಕ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ನಂಜನಗೂಡು ನಗರದ ಹುಲ್ಲಹಳ್ಳಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿ ಶನೇಶ್ವರ ಗೂಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದಿ0ದ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕಸಾಪ ಗೌರವಾಧ್ಯಕ್ಷ ಚಿಕ್ಕರಂಗನಾಯಕ, ಕನ್ನಡ ಭಾಷೆ ಪ್ರೌಢಿಮೆ ಹೊಂದಿದ್ದು, ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಭಾಷೆ ಉತ್ಕಷ್ಟತೆ ಪಡೆದಿ ಎಂದರು.
ಆಟೋ ಚಾಲಕರ ಸಂಘದ ಸದಸ್ಯರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮದಿ0ದ ರಾಜ್ಯೋತ್ಸವ ಆಚರಿಸಲಾಯಿತು. ರವಿ, ಶ್ರೀ ಶನೇಶ್ವರ ಗೂಡ್ಸ್ ಸರಕು ಸಾಗಾಣಿಕೆ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿಂಧುವಳ್ಳಿ ವೇಣುಗೋಪಾಲ್, ಉಪಾಧ್ಯಕ್ಷ ರವೀಂದ್ರನ್, ಮಹದೇವ್, ರಾಜೇಶ್ ಇದ್ದರು.
ಚಿಕ್ಕರಂಗನಾಯಕ, ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರು ಹಾಗೂ ಮಾಜಿ ಜಿಪಂ ಸದಸ್ಯರು.