ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜ್ಯೋತ್ಸವ
1 min readಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜ್ಯೋತ್ಸವ
ಚಿತ್ರಾವತಿ ಬಿಇಡಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡ ನಾಡು ನುಡಿಯ ಬೆಳವಣಿಗೆಯಲ್ಲಿ ಸಾಹಿತಿಗಳು, ವಿದ್ಯಾರ್ಥಿಗಳು, ಮಾಧ್ಯಮಗಳು ಮಹತ್ತರ ಪಾತ್ರ ವಹಿಸಿದ್ದು, ನಾಡು ನುಡಿಯ ಹಿತರಕ್ಷಣೆಗೆ ಇಂದಿನ ಪೀಳಿಗೆಯ ಹೊಣೆ ಹೆಚ್ಚಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ತಾಲ್ಲೂಕು ರಾಷ್ಟಿಯ ಹೆದ್ದಾರಿ 7ರ ಚಿತ್ರಾವತಿ ಬಿಇಡ್ ಕಾಲೇಜಿನಲ್ಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಮಾಧ್ಯಮಗಳ ಅಂತರ್ ಶಿಸ್ತಿನ ಪ್ರಭಾವ ಪ್ರಾಮುಖ್ಯತೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಕನ್ನಡ ಉಳಿಸಲು ಎಲ್ಲರ ಶ್ರಮ ಅಭಿನಂದನಾರ್ಹ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊ0ಡಿದ್ದರೂ ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಭಿಮಾನ ಹೆಚ್ಚಿದೆ. ಇಂದಿನ ಯುವ ಪೀಳಿಗೆ ಭಾಷೆಯ ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೋ.ಕೋಡಿ ರಂಗಪ್ಪ ವಿದ್ಯಾರ್ಥಿಗಳಿಗೆ ಕನ್ನಡ ಮಹತ್ವದ ಕುರಿತು ಅರಿವು ಮೂಡಿಸಿದರು. ತಾಲ್ಲೂಕು ಪರಿಷತ್ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಚಿತ್ರಾವತಿ ಬಿಇಡ್ ಕಾಲೇಜು ಪ್ರಾಂಶುಪಾಲ ಬಾಹುಬಲಿ ಇದ್ದರು.