ಜೈ ಕರ್ನಾಟಕ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವ
1 min readಜೈ ಕರ್ನಾಟಕ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವ
ಮಂಚೇನಹಳ್ಳಿಯಲ್ಲಿ ಕನ್ನಡ ಪ್ರೇಮ ಮೆರದ ಯುವಕರು
ಮಂಚೇನಹಳ್ಳಿ ಗಣೇಶ ದೇವಸ್ಥಾನದ ಬಳಿ ಜೈ ಕರ್ನಾಟಕ ಗೆಳೆಯರ ಬಳಗದಿಂದ 69ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನೆರವೇರಿತು. ಸಾಹಿತಿ ಕಿರಣ್ ಕುಮಾರ್ ಮಾತನಾಡಿ, ಕನ್ನಡದ ಅಸ್ಮಿತೆ ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದೆ. ತೆಲುಗಿನ ಪ್ರಭಾವ ಇರುವ ಮಂಚೇನಹಳ್ಳಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸಲು ಶ್ರಮಿಸಬೇಕಿದೆ ಎಂದು ಸಾಹಿತಿ ಕಿರಣ್ ಕುಮಾರ್ ಹೇಳಿದರು. ಮಂಚೇನಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಹೊರ ರಾಜ್ಯದಿಂದ ವ್ಯಾಪಾರಕ್ಕಾಗಿ ಬಂದವರು ಕನ್ನಡ ಕಲಿಯಬೇಕು, ನಾಮಪಲಕಗಳನ್ನು ಕನ್ನಡದಲ್ಲಿ ಬರಿಸಬೇಕು ಎಂದರು.
ಜೈ ಕರ್ನಾಟಕ ಗೆಳೆಯರ ಬಳಗದ ಎಚ್. ಎ. ಮುರಳಿ ಮಾತನಾಡಿ, ಮಂಚೇನಹಳ್ಳಿ ಗಡಿನಾಡು ಆಗಿರುವುದರಿಂದ ತೆಲುಗು ಮಾತನಾಡುವವರು ಹೆಚ್ಚು, ಜೈ ಕರ್ನಾಟಕ ಗೆಳೆಯರ ಬಳಗದ ಸದಸ್ಯರು ಕನ್ನಡವನ್ನು ಬೆಳೆಸಬೇಕೆಂಬುವುದೇ ಉದ್ದೇಶವಾಗಿದೆ. ಸುಮಾರು ೧೬ ವರ್ಷದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎ ಲ್ಲಾ ಶಾಲಾ ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಗಣ್ಯರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ತಾ. ಅಧ್ಯಕ್ಷೆ ಪ್ರಬಾ ನಾರಾಯಣಗೌಡ, ಪಿಎಸ್‌ಐ ಮೂರ್ತಿ, ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ, ಲಕ್ಷಿ ನಾರಾಯಣ್, ಪ್ರಿಯಾಂಕ ಇದ್ದರು.