ಜನಪರ ಕೆಲಸಗಳಿಗೆ ಜುಬಿಲೆಂಟ್ ಸಂಸ್ಥೆ ಸಹಕಾರಿ

ಪ್ರಸಿದ್ಧ ಶಿವಗಂಗಾ ಚಿತ್ರಮಂದಿರ ಬಂದ್

Untitled

ಅಧಿಕಾರಿಗಳ ನಿರ್ಲಕ್ಷಕ್ಕೆ ಸಚಿವರ ಕನಸಿನ ಕಾರ್ಯಕ್ರಮ ರದ್ದು

May 24, 2025

Ctv News Kannada

Chikkaballapura

ಸೃಜನಶೀಲ ಕಥಾ ಸೃಷ್ಟಿಗೆ ಮಾರ್ಗದರ್ಶಕ ‘ಕಲ್ಕಿ’.. ಪ್ರಭಾಸ್​ ಚಿತ್ರಕ್ಕೆ ನಟ ಯಶ್ ಮೆಚ್ಚುಗೆ

1 min read

ಪ್ರಭಾಸ್ ಅಭಿನಯ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಜೂನ್ 28 ರಂದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು, ವಿಮರ್ಶಕರು ಮತ್ತು ಖ್ಯಾತ ನಟ-ನಟಿಯರು, ಸೆಲಬ್ರಿಟಿಗಳು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹ ಹರತಾಗಿಲ್ಲ.

ಚಿತ್ರದ ಬಗ್ಗೆ ಯಶ್​ ಶ್ಲಾಘಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್​ ಹಾಕಿದ್ದಾರೆ.

ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ. ನಾಗ್​ ಅಶ್ವಿನ್​ ಚಮತ್ಕಾರ ಮಾಡಿದಂತೆ ತೋರುತ್ತದೆ. ಅತಿಥಿ ಪಾತ್ರಗಳ ತಾರಾಗಣ ಸಂಯೋಜನೆಯು ಮರೆಯಲಾಗದ ಸಿನಿಮೀಯ ಅನುಭವವನ್ನು ಸೃಷ್ಟಿಸುತ್ತದೆ. ಇಡೀ ಚಿತ್ರ ತಂಡ ಅದ್ಭುತವಾದ ಚಮತ್ಕಾರವನ್ನು ಸೃಷ್ಟಿಸಿದಕ್ಕಾಗಿ ಪ್ರಶಂಸೆಗಳು. ಈ ಚಿತ್ರವು ಮತ್ತಷ್ಟು ಸೃಜನಶೀಲ ಕಥೆಗಳನ್ನು ಸೃಷ್ಟಿಸಲು ದಾರಿ ಮಾಡಿಕೊಡುತ್ತದೆ. ನಾಗ್ ಅಶ್ವಿನ್ ಮತ್ತು ವೈಜಯಂತಿ ಫಿಲ್ಮ್ಸ್ ನ ದೃಷ್ಟಿ ಮತ್ತು ಧೈರ್ಯವು ಅನೇಕರು ದೊಡ್ಡ ಹೆಜ್ಜೆಗಳನ್ನು ಇಡಲು ಪ್ರೇರೇಪಿಸುತ್ತದೆ ಎಂದು ತಮ್ಮ ಅಧಿಕೃತ ಎಕ್ಸ್​ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.

ಚಿತ್ರವನ್ನು ನೋಡಿದ ಮೇಲೆ ವೀಕ್ಷಣಾ ಅನುಭವವನ್ನು ಶ್ರೀಮಂತಗೊಳಿಸಿತು.ಈ ಚಿತ್ರವನ್ನು ಒಟ್ಟಿಗೆ ತರಲು ತೊಡಗಿರುವ ಎಲ್ಲರಿಗೂ ಅಭಿನಂದನೆಗಳು. ಇದು ನಿಜವಾಗಿಯೂ ಬೆಳ್ಳಿತೆರೆಯನ್ನು ಬೆಳಗಿಸುತ್ತದೆ ಎಂದು ಯಶ್​ ಅಭಿಪ್ರಾಯಪಟ್ಟಿದ್ದಾರೆ.

ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಬಗ್ಗೆ ಯಶ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *