ನಾಡಿಗೆ ದಾವಿಸುತ್ತಿದ್ದ ಕಾಡಾನೆ ಕಂದಕಕ್ಕೆ ಉರುಳಿ ಸಾವು
1 min readನಾಡಿಗೆ ದಾವಿಸುತ್ತಿದ್ದ ಕಾಡಾನೆ ಕಂದಕಕ್ಕೆ ಉರುಳಿ ಸಾವು
ಅರಣ್ಯ ಅಧಿಕಾರಿಗಳ ನಿರ್ಲಕ್ಷತನಕ್ಕೆ ರೈತರಿಂದ ಆಕ್ರೋಶ
ಆಹಾರ ಅರಸಿ ಕಾಡಿನಿಂದ ನಾಡಿಗೆ ಧಾವಿಸುತ್ತಿದ್ದ ಬಾರಿ ಗಾತ್ರದ ದಂತಗಳಿರುವ ಒಂಟಿ ಸಲಗ ಅರಣ್ಯ ಅಧಿಕಾರಿಗಳು ಅಳವಡಿಸಿರುವ ಸೋಲಾರ್ ತಂತಿ ತಗುಲಿ ಕಂದಕಕ್ಕೆ ಉರುಳಿದ ಪರಿಣಾಮ ಮೇಲೆ ಏಳಲಾಗದೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ದನದ ದಾರಿಯ ಬಳಿ ಸುಮಾರು ೪೦ ವರ್ಷದ ಗಂಡು ಆನೆ ಸಾವನಪ್ಪಿದೆ. ಬೆಳ್ಳಂ ಬೆಳಗ್ಗೆ ಕೆಲ್ಲು ಪುರ ಗ್ರಾಮದ ರೈತರೊಬ್ಬರು ತಮ್ಮ ಜಮೀನಿಗೆ ಧಾವಿಸುತ್ತಿರುವ ಸಂದರ್ಭದಲ್ಲಿ ಕಂದಕದಲ್ಲಿ ಉರುಳಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಆನೆಯನ್ನು ಗಮನಿಸಿ ಸಮೀಪದ ಓಂಕಾರ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರ ಮಟ್ಟಿಸಿದ್ದಾ ರೆ.
ತಡವಾಗಿ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕೆಲ್ಲುಪುರ ಗ್ರಾಮದ ಬಳಿ ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ದಾವಿಸಬಾರದು ಎಂಬ ಉದ್ಧೇಶದಿಂದ ಭಾರೀ ಪ್ರಮಾಣದ ಆನೆ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ನಾಡಿನತ್ತ ದಾವಿಸಲು ಮುಂದಾದ ಒಂಟಿ ಸಲಗ ಅರಣ್ಯ ಅಧಿಕಾರಿಗಳು ಅಳವಡಿಸಿರುವ ಸೋಲಾರ್ ತಗುಲಿ ಕಂದಕಕ್ಕೆ ಉರುಳಿ ಬಿದ್ದಿದೆ. ದೊಡ್ಡ ಗಾತ್ರದ ಆನೆಯಾಗಿರುವ ಕಾರಣ ಮೇಲೆ ಏಳಲಾಗದೆ ಆನೆ ಸಾವನಪ್ಪಿದೆ ಎಂದು ಸ್ಥಳದಲ್ಲಿದ್ದ ರೈತ ಮುಖಂಡರು ತಿಳಿಸಿದರು.
ಸ್ಥಳಕ್ಕೆ ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ಎಸಿಎಫ್ ಪ್ರಭಾಕರ್, ಆರ್‌ಎಫ್‌ಒ ನಿತಿನ್ ಕುಮಾರ್ ಸೇರಿದಂತೆ ಓಂಕಾರ್ ಅರಣ್ಯ ಇಲಾಖೆಯ ವೈಡ್ ಲೈಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದಾರೆ. ಸಾವನಪ್ಪಿರುವ ಆನೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಕಾರಣವಾಗಿರುವ ನಿಖರ ಮಾಹಿತಿ ತಿಳಿದು, ತಪಿತಸ್ತರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.